ಎಚ್ಚರ..! ಲಸಿಕೆ ನೀಡುವುದಾಗಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ

ಗ್ರಾಮಸ್ಥರ ತರಾಟೆಗೆ ಖಾಸಗಿ ಆಸ್ಪತ್ರೆ ಮ್ಯಾನೇಜರ್​ ತಬ್ಬಿಬ್ಬು..!
ಎಚ್ಚರ..! ಲಸಿಕೆ ನೀಡುವುದಾಗಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ

ದಕ್ಷಿಣ ಕನ್ನಡ: ಕೊರೊನಾ ಲಸಿಕೆ ಕೊಡಿಸುವುದಾಗಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ ಮಾಡಿರುವ ಘಟನೆ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಕಾರ್ನಾಡು ಗ್ರಾಮದಲ್ಲಿ ನಡೆದಿದೆ.

ರಾತ್ರೋರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯ ಮ್ಯಾನೇಜರ್​ ಕೊರೊನಾ ಲಸಿಕೆ ನೀಡುವುದಾಗಿ 85 ಮಹಿಳೆಯರನ್ನು, ತಮ್ಮ ಸಂಸ್ಥೆ ಬಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಗ್ರಾಮಸ್ಥರು ತಡರಾತ್ರಿ ಯಾವ ಲಸಿಕೆ ಕೊಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರ ಪ್ರಶ್ನೆಗೆ ಮ್ಯಾನೇಜರ್​ ತಬ್ಬಿಬ್ಬಾಗಿದ್ದಾರೆ.

ಘಟನೆ ಸಂಬಂಧ ಬಸ್​ ಚಾಲಕ ಪ್ರವೀಣ್, ಆಸ್ಪತ್ರೆ ಮ್ಯಾನೇಜರ್ ನವಾಜ್ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Stories

No stories found.
TV 5 Kannada
tv5kannada.com