ಸಂಸದರಾಗಿ ಮಂಡ್ಯ ಜನರ ಋಣ ತೀರಿಸಿ - ನಿಖಿಲ್​ ಕುಮಾರಸ್ವಾಮಿ

ಸಂಸದರಾಗಿ ಮಂಡ್ಯ ಜನರ ಋಣ ತೀರಿಸಿ - ನಿಖಿಲ್​ ಕುಮಾರಸ್ವಾಮಿ

ನನ್ನ ತಂದೆಯ ರಾಜಕೀಯದ ಬಗ್ಗೆ ಸಂಸದರು ಪ್ರಮಾಣ ಪತ್ರ ನೀಡಿದ್ದಾರೆ. ಇದು ನನಗೆ ಸಂತೋಷ ತಂದಿದೆ.

ಕೋಲಾರ: ಕೆಆರ್​ಎಸ್​ ಅಣೆಕಟ್ಟೆಗೆ ಆದರದ್ದೇ ಆದ ಇತಿಹಾಸವಿದೆ. ರಾಜರು ತಮ್ಮ ಒಡವೆಗಳನ್ನ ಅಡ ಇಟ್ಟು ಡ್ಯಾಂ ಕಟ್ಟಿದ್ದಾರೆ ಅಂತಹ ಡ್ಯಾಂ ಬಿರುಕು ಬಿಟ್ಟಿದೆ ಅಂದರೆ ಸರಿಯಲ್ಲ ಎಂದು ಜೆಡಿಎಸ್​ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಅವರು ಸಂಸದೆ ಸುಮಲತಾ ಅಂಬರೀಶ್ ಅವರ ಹೇಳಿಕೆಯನ್ನು ತಿರಸ್ಕಾರಿಸಿದ್ದಾರೆ.

ಈ ಸಂಬಂಧ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ರೀತಿ ಹೇಳಿಕೆಯಿಂದ ಜನರಲ್ಲಿ ಆತಂಕ ಸೃಷ್ಟಿಯಾಗುತ್ತದೆ. ಸಂಸದರು ಗೊಂದಲ ಸೃಷ್ಟಿಸಿ ಮಾತನಾಡಿದ್ದು ಸರಿಯಲ್ಲ, ಡ್ಯಾಂ ಬಿರುಕು ಬಿಟ್ಟಿದ್ರೆ ಟೆಕ್ನಿಕಲ್ ಟೀಂ ಸರಿ ಮಾಡುತ್ತೆ ಅವರು ಇದರ ಬಗ್ಗೆ ಮಾತನಾಡುತ್ತಾರೆ ಎಂದಿದ್ದಾರೆ.

ಇನ್ನು ಚುನಾವಣೆ ಅಂದ ಮೇಲೆ ಸೋಲು-ಗೆಲುವು ಸಾಮಾನ್ಯವಾದುದು. ನನ್ನ ಸೋಲನ್ನ ನಾನು ಒಪ್ಪಿಕೊಂಡಿದ್ದೇನೆ. ಐದು ಮುಕ್ಕಾಲು ಲಕ್ಷ ಜನ ನನಗೆ ಮತ ಹಾಕಿದರು. ಅದು ಸಣ್ಣ ಸಂಖ್ಯೆ ಅಲ್ಲ, ಬೇಜಾರು ಮಾಡಿಕೊಳ್ಳುವಂತದ್ದು ಏನೂ ಇಲ್ಲ, ಸಂಸದರಾಗಿ ಮಂಡ್ಯ ಜನ ನಿಮಗೆ ಅವಕಾಶ ನೀಡಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡಿ ಎಂದು ಮಂಡ್ಯ ಸಂಸದರಿಗೆ ಸಲಹೆ ಟಾಂಗ್​ ಕೊಟ್ಟಿದ್ದಾರೆ.

ಸದ್ಯ ನನ್ನ ತಮ್ಮನ ರಾಜಕೀಯದ ಬಗ್ಗೆ ಸಂಸದರು ಪ್ರಮಾಣ ಪತ್ರ ನೀಡಿದ್ದಾರೆ. ಇದು ನನಗೆ ಸಂತೋಷ ತಂದಿದೆ. ಅಕ್ರಮ ಗಣಿಗಾರಿಕೆ ಇದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿ. ಜೆಡಿಎಸ್ ಇರಲಿ ಯಾರೇ ಇದ್ರೂ ಕ್ರಮ ತೆಗೆದುಕೊಳ್ಳಲಿ. ಒಬ್ಬ ನಾಗರಿಕನಾಗಿ ಸರ್ಕಾರವನ್ನು ಒತ್ತಾಯಿಸುತ್ತೇನೆ. ರಾಜ್ಯದ ಜನ ಎಲ್ಲವನ್ನು ಗಮನಿಸುತ್ತಿದ್ದಾರೆ. ರಾಜ್ಯದಲ್ಲಿ ೨೨ ತಿಂಗಳಲ್ಲಿ ಚುನಾವಣೆ ಎದುರಾಗುತ್ತೆ. ಯುವ ಅಧ್ಯಕ್ಷನಾಗಿ ಈಗಾಗಲೇ ಎಲ್ಲಾ ಕಡೆ ಓಡಾಡ್ತಿದೀನಿ. ಯುವಕರಿಗೆ ಆದ್ಯತೆ ನೀಡುವುದು ನನ್ನ ಜವಾಬ್ದಾರಿ ಎಂದರು.

Related Stories

No stories found.
TV 5 Kannada
tv5kannada.com