ವಿದ್ಯುತ್​ ತಂತಿ ಮೈ ಮೇಲೆ ಬಿದ್ದು ರೈತ ದಾರುಣ ಸಾವು

ಹೂವಿನ ಹಡಗಲಿ ತಾಲೂಕಿನ ಡುಂಗಾವತ್ ತಾಂಡಾದಲ್ಲಿ ಘಟನೆ
ವಿದ್ಯುತ್​  ತಂತಿ ಮೈ ಮೇಲೆ  ಬಿದ್ದು ರೈತ ದಾರುಣ ಸಾವು

ಬಳ್ಳಾರಿ: ವಿದ್ಯುತ್​ ತಂತಿ ಮೈ ಮೇಲೆ ಬಿದ್ದು ರೈತ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೂವಿನ ಹಡಗಲಿ ತಾಲೂಕಿನ ಡುಂಗಾವತ್ ತಾಂಡಾದಲ್ಲಿ ನಡೆದಿದೆ. ಮಂಜುನಾಯ್ಕ್ ಮೃತ ದುರ್ದೈವಿ.

ಮಂಜುನಾಥ್​ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ತಂತಿ ಕಟ್ ಆಗಿ ಮೈ ಮೇಲೆ ಬಿದ್ದಿದ್ದು, ಮಂಜುನಾಥ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Related Stories

No stories found.
TV 5 Kannada
tv5kannada.com