ಬೆಳಗಾವಿಯಲ್ಲಿ ಯೂಟ್ಯೂಬರ್​​ ಬರ್ಬರ ಹತ್ಯೆ

ಬೆಳಗಾವಿಯಲ್ಲಿ ಯೂಟ್ಯೂಬರ್​​ ಬರ್ಬರ ಹತ್ಯೆ

ಮೂಡಲಗಿ ತಾಲೂಕಿನ ಚುನಿಮಟ್ಟಿ ಗ್ರಾಮದಲ್ಲಿ ತಡರಾತ್ರಿ ನಡೆದ ಘಟನೆ

ಬೆಳಗಾವಿ: ಯೂಟ್ಯೂಬ್​ ಚಾನೆಲ್​​ ಸಬ್​ ಎಡಿಟರ್​ನ್ನ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಹತ್ತಿರದ ಚುನಿಮಟ್ಟಿ ಗ್ರಾಮದಲ್ಲಿ ನಡೆದಿದೆ. ಶಿವಾನಂದ ಕಾಚ್ಯಾಗೋಳ(30) ಕೊಲೆಯಾದ ದುರ್ದೈವಿ.

ನಿನ್ನೆ ತಡರಾತ್ರಿ ಈ ಘಟನೆ ಸಂಭವನಿಸಿದ್ದು, ಕೊಲೆಗೆ ನಿಖರ ಕಾರಣ ಈವರೆಗೆ ತಿಳಿದು ಬಂದಿಲ್ಲ. ಇನ್ನು ಮೃತ ಶಿವಾನಂದ್​ ಖಾಸಗಿ ಯೂಟ್ಯೂಬ್ ಚಾನಲ್‌ನ ಸಹ ಸಂಪಾದಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಕೇಸ್ ಆರೋಪಿಗಳ ಪತ್ತೆಗಾಗಿ ಎಸ್​ಪಿ ಲಕ್ಷ್ಮಣ್​ ನಿಂಬರಗಿ ಡಿವೈಎಸ್​ಪಿ ನೇತೃತ್ವದ ತಂಡ ರಚನೆ ಮಾಡಿದ್ದಾರೆ.

Related Stories

No stories found.
TV 5 Kannada
tv5kannada.com