ಸಾಲ ನೀಡದ ಪಾನ್​ ಶಾಪ್​ ಮಾಲೀಕನನ್ನು ಭೀಕರವಾಗಿ ಹತ್ಯೆ ಗೈದ ರೌಡಿಶೀಟರ್​

ಸಾಲ ನೀಡದ ವಿಚಾರಕ್ಕೆ ಬರ್ಬರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯ
ಸಾಲ ನೀಡದ ಪಾನ್​ ಶಾಪ್​ ಮಾಲೀಕನನ್ನು ಭೀಕರವಾಗಿ ಹತ್ಯೆ ಗೈದ ರೌಡಿಶೀಟರ್​

ಬೆಳಗಾವಿ: ಸಾಲ ನೀಡದ ವಿಚಾರಕ್ಕೆ ರೌಡಿಶೀಟರ್​ ಪಾನ್​ ಶಾಪ್​ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ವಡಗಾವಿಯ ಲಕ್ಷ್ಮಿ ನಗರದಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಬಾಲಕೃಷ್ಣ ಶೆಟ್ಟಿ ಮೃತ ದುರ್ದೈವಿ.

ಮೃತ ಬಾಲಕೃಷ್ಣ ಲಕ್ಷ್ಮಿ ನಗರದಲ್ಲಿ ಪಾನ್​ ಶಾಪ್​ ಇಟ್ಟುಕೊಂಡಿದ್ದರು. ಕೊಲೆಯ ಆರೋಪಿ ರೌಡಿಶೀಟರ್ ದತ್ತಾ ಜಂತಿನಕಟ್ಟಿ ಈ ಹಿಂದೆ ಬಾಲಕೃಷ್ಣ ಅಂಗಡಿಯಲ್ಲಿ ಸಾಲ ನೀಡುವುದಿಲ್ಲ ಎನ್ನುವ ವಿಚಾರಕ್ಕೆ ಗಲಾಟೆ ನಡೆಸಿದ್ದು, ನಿನ್ನೆ ನನ್ನ ಮೊಬೈಲ್​ ಕಳುವಾಗಿದೆ ಅದು ನಿನ್ನ ಅಂಗಡಿಯಲ್ಲೇ ಇದೆ ಎಂದು ಜಗಳ ತೆಗೆದಿದ್ದ ಎನ್ನಲಾಗಿದೆ. ಈ ವೇಳೆ ಸ್ಥಳೀಯರು ಮಧ್ಯಸ್ಥಿಗೆ ವಹಿಸಿ ಜಗಳ ಬಿಡಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ದತ್ತಾ ಜಂತಿನಕಟ್ಟಿ ನಿನ್ನೆ ತಡರಾತ್ರಿ ಬಾಲಕೃಷ್ಣ ಶೆಟ್ಟಿ ಮನೆಗೆ ನುಗ್ಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Stories

No stories found.
TV 5 Kannada
tv5kannada.com