ಕೊರೊನಾ ನೆಗೆಟಿವ್​ ವರದಿ ಇಲ್ಲದ ಪ್ರಯಾಣಿಕರು ಮುಂಬೈಗೆ ವಾಪಾಸ್​

ಬೆಳಗಾವಿ ಗಡಿ ಭಾಗಗಳಲ್ಲಿನ ಚೆಕ್​​ಪೋಸ್ಟ್​ನಲ್ಲಿ ಹೈ ಅಲರ್ಟ್​
ಕೊರೊನಾ ನೆಗೆಟಿವ್​ ವರದಿ ಇಲ್ಲದ ಪ್ರಯಾಣಿಕರು ಮುಂಬೈಗೆ ವಾಪಾಸ್​

ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಗಡಿ ಭಾಗಗಳಲ್ಲಿನ ಚೆಕ್​​ಪೋಸ್ಟ್​ಗಳನ್ನು​ ಬಿಗಿಗೊಳಿಸಲಾಗಿದೆ.

ಮಹಾರಾಷ್ಟ್ರದಿಂದ ಬರುವವರಿಗೆ ಕೋವಿಡ್ ನೆಗಟಿವ್ ವರದಿ ಕಡ್ಡಾಯವಾಗಿದೆ. ಹೀಗಾಗಿ ನೆಗಟಿವ್ ವರದಿ ಇಲ್ಲದ ಪ್ರಯಾಣಿಕರಿರುವ ಬಸ್​ಗಳನ್ನು ಪೊಲೀಸರು ವಾಪಾಸ್​ ಕಳುಹಿಸಿದ್ದಾರೆ.

ಮುಂಬೈ ಹಾಗೂ ಪುನಾದಿಂದ ಬಂದ ಬಸ್​ಗಳನ್ನು ಕೂಗನ್ನೊಳ್ಳಿ ಮತ್ತು ಕಾಗವಾಡ ಚೆಕ್ಟ್​ಪೋಸ್ಟ್​ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಪೊಲೀಸರು ಪ್ರತಿಯೊಬ್ಬ ಪ್ರಯಾಣಿಕರ ನೆಗೆಟಿವ್​ ವರದಿ ಪರಿಶೀಲನೆ ನಡೆಸುತ್ತಿದ್ದಾರೆ.

Related Stories

No stories found.
TV 5 Kannada
tv5kannada.com