ಇಬ್ಬರ ಜಗಳ ಬಿಡಿಸಲು ಹೋದ ಡಾಭಾ ಮಾಲೀಕನ ಕೊಲೆ

‌ಕಿತ್ತೂರು‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
ಇಬ್ಬರ ಜಗಳ ಬಿಡಿಸಲು ಹೋದ ಡಾಭಾ ಮಾಲೀಕನ ಕೊಲೆ

ಬೆಂಗಳೂರು: ಇಬ್ಬರ ನಡುವಿನ ಜಗಳ ಬಿಡಿಸಲು ಹೋದ ವ್ಯಕ್ತಿ ಮಾರಾಣಾಂತಿಕ ಹಲ್ಲೆಯಿಂದ ಕೊಲೆಯಾಗಿರುವ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಬಳಿ ನಡೆದಿದೆ. ಡಾಭಾ ಮಾಲೀಕ ಪ್ರಕಾಶ ನಾಗನೂರು(38) ಮೃತ ದುರ್ದೈವಿ.

ನಿನ್ನೆ ಸಂಜೆ ಯುವಕರ ಎರಡು ತಂಡಗಳು ಪ್ರಕಾಶ್​ ಡಾಭಾಕ್ಕೆ‌ ಬಂದಿದ್ದರು. ಮೊದಲು ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಜನಗ ತಾರಕ್ಕೇರಿದೆ. ಇದನ್ನು ಕಂಡ ಪ್ರಕಾಶ್​ ಜಗಳ ಬಿಡಿಸಲು ಮಧ್ಯೆ ಪ್ರವೇಶಿಸಿದ್ದಾರೆ. ಈ ವೇಳೆ ಯುವಕರು ಪ್ರಕಾಶ್​ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆದಿದ್ದಾರೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶ್​ರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ.

‌ಕಿತ್ತೂರು‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Stories

No stories found.
TV 5 Kannada
tv5kannada.com