ವಿರಹ ವೇದನೆ: ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ಪ್ರೇಮಿಗಳ ಆತ್ಮಹತ್ಯೆ

ಒಂದು ತಿಂಗಳ ಹಿಂದೆ ಬೇರೆ ಯುವಕನೊಂದಿಗೆ ಮೃತ ಯುವತಿ ವಿವಾಹ
ವಿರಹ ವೇದನೆ: ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ಪ್ರೇಮಿಗಳ ಆತ್ಮಹತ್ಯೆ

ಬೆಳಗಾವಿ: ವಿರಹ ವೇದನೆಯಿಂದ ಮನನೊಂದ ಪ್ರೇಮಿಗಳಿಬ್ಬರು ಒಂದೇ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸವದತ್ತಿ ತಾಲೂಕಿನ ಸಿಂದೋಗಿ ಗ್ರಾಮದಲ್ಲಿ ನಡೆದಿದೆ. ಪಂಚಪ್ಪಾ ಕಣವಿ ಹಾಗೂ ಸಕ್ಕೂಬಾಯಿ ಕರಿಗಾರ ಮೃತ ದುರ್ದೈವಿಗಳು.

ಪಂಚಪ್ಪಾ ಕಣವಿ ಹಾಗೂ ಸಕ್ಕೂಬಾಯಿ ಕೆಲ ಸಮಯದಿಂದ ಪ್ರೀತಿಸುತ್ತಿದ್ದರು. ಆದರೆ ಕೆಲ ಕಾರಣಗಳಿಂದ ಸಕ್ಕೂಬಾಯಿಗೆ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಬೇರೆ ಯುವಕನ ಜೊತೆ ವಿವಾಹ ಆಗಿತ್ತು. ಇದರಿಂದ ಮನನೊಂದ ಜೋಡಿ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದೆ.

Related Stories

No stories found.
TV 5 Kannada
tv5kannada.com