ಆಸ್ತಿ ವಿವಾದ: ಸಹೋದರನನ್ನು ಮಹಡಿಯಿಂದ ನೂಕಲು ಯತ್ನಿಸಿದ ನಾಲ್ವರ ಬಂಧನ

ಆಸ್ತಿ ವಿವಾದ: ಸಹೋದರನನ್ನು ಮಹಡಿಯಿಂದ ನೂಕಲು ಯತ್ನಿಸಿದ ನಾಲ್ವರ ಬಂಧನ

ಬೆಳಗಾವಿ: ಆಸ್ತಿ ವಿವಾದ ಹಿನ್ನೆಲೆ, ಸಹೋದರನನ್ನು ಕಟ್ಟಡದ ಎರಡನೇ ಮಹಡಿಯಿಂದ ನೂಕಲು ಯತ್ನಿಸಿದ ಆರೋಪದ ಮೇಲೆ ನಾಲ್ವರನ್ನು ಖಡೇಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೆಪ್ಟೆಂಬರ್ 5ರಂದು ಬೆಳಗಾವಿಯ ಕಡೋಲ್ಕರ್ ಗಲ್ಲಿಯಲ್ಲಿ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆಸ್ತಿ ವಿಚಾರವಾಗಿ ಭುತೆ ಕುಟುಂಬದ ಸಹೋದರರಾದ ಶ್ರೀಧರ್, ಸಂದೀಪ್, ಸುನೀಲ್ ಎಂಬುವವರ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಸಂದೀಪ್​ ಮತ್ತು ಸುನೀಲ್​ ಶ್ರೀಧರ್​​ ಎಂಬುವವರ ಮೇಲೆ ಹಲ್ಲೆ ನಡೆಸಿ, ಕಟ್ಟಡದ ಎರಡನೇ ಮಹಡಿಯಿಂದ ನೂಕಲು ಯತ್ನಿಸಿದ್ದಾರೆ. ಗಲಾಟೆ ಬಿಡಿಸಲು ಬಂದ ತಂದೆಯನ್ನು ಕೂಡ ನೂಕಾಡಿರುವ ಆರೋಪ ಕೇಳಿಬಂದಿದೆ.

ಕಟ್ಟಡದ ಎರಡನೇ ಮಹಡಿ ಮೇಲೆ‌ ನಡೆದ ಹೈಡ್ರಾಮಾದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತು ಶ್ರೀಧರ್ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಮೇರೆಗೆ ಇಬ್ಬರು ಸಹೋದರರು ಸೇರಿ ನಾಲ್ವರನ್ನು ಬಂಧಿಸಲಾಗಿದೆ.

Related Stories

No stories found.
TV 5 Kannada
tv5kannada.com