ಕೋಟ್ಯಂತರ ರೂಪಾಯಿ ವಂಚನೆ ಕೇಸ್​: ಕಾರ್ವಿ ಗ್ರೂಪ್ ಆಫ್ ಸದಸ್ಯ ಅರೆಸ್ಟ್​

ಕೋಟ್ಯಂತರ ರೂಪಾಯಿ ವಂಚನೆ ಕೇಸ್​: ಕಾರ್ವಿ ಗ್ರೂಪ್ ಆಫ್ ಸದಸ್ಯ ಅರೆಸ್ಟ್​

ಬೆಂಗಳೂರು: ನಗರದಲ್ಲಿ ಅಮಾಯಕ ಜನರಿಗೆ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆಕಾರ್ವಿ ಗ್ರೂಪ್ ಆಫ್ ಕಂಪನಿಯ ಸದಸ್ಯನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಷೇರು ಮಾರುಕಟ್ಟೆಯಲ್ಲಿ ಜನರ ಬಳಿ ಷೇರು ಪಡೆದು ಬಳಿಕ ಅದನ್ನು ಬ್ಯಾಂಕ್​​ನಲ್ಲಿ ಅಡವಿಟ್ಟು ಸಾಲ ಪಡೆಯುತ್ತಿದ್ದರು. ಇದೇ ರೀತಿ ಸಾವಿರಾರು ಜನರಿಗೆ ವಂಚಿಸಿರುವ ಖದೀಮರ ತಂಡ ಬಳ್ಳಾರಿ ಮೂಲದ ಉದ್ಯಮಿಗಳಿಗೆ ಟೋಪಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಉದ್ಯಮಿಯೋರ್ವರು ಕೊಟ್ಟ ದೂರಿನ ಮೇರೆಗೆ ಕಾರ್ಯಾಚರಣೆಗಿಳಿದಿದ್ದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಗಳು ಇದೇ ರೀತಿ ತೆಲಂಗಾಣದಲ್ಲಿಯೂ ₹2,300 ಕೋಟಿ ವಂಚಿಸಿದ್ದರು ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Related Stories

No stories found.
TV 5 Kannada
tv5kannada.com