ಕೊರೊನಾ ನಡುವೆಯೇ ಡೆಂಘೀ ಆತಂಕ: 3 ತಿಂಗಳಲ್ಲಿ 6 ಪಟ್ಟು ಹೆಚ್ಚಳ

ಕೊರೊನಾ ನಡುವೆಯೇ ಡೆಂಘೀ ಆತಂಕ: 3 ತಿಂಗಳಲ್ಲಿ 6 ಪಟ್ಟು ಹೆಚ್ಚಳ

ಬೆಂಗಳೂರು: ನಗರದಲ್ಲಿ ಕೊರೊನಾ ನಡುವೆಯೇ ಡೆಂಘೀ ಆತಂಕ ಹೆಚ್ಚಾಗಿದೆ. ಮಳೆಗಾಲ ಆರಂಭದಿಂದ ಡೆಂಘೀ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಮೂರು ತಿಂಗಳಲ್ಲಿ ಆರು ಪಟ್ಟು ಹೆಚ್ಚಳವಾಗಿದೆ.

ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ 102 ಡೆಂಘೀ ಪ್ರಕರಣಗಳಿದ್ದು, ಜೂನ್​ನಲ್ಲಿ 174 ಪ್ರಕರಣ, ಜುಲೈನಲ್ಲಿ 351 ಪ್ರಕರಣ ಹಾಗೂ ಆಗಸ್ಟ್​ನಲ್ಲಿ 677 ಪ್ರಕರಣಗಳು ಪತ್ತೆಯಾಗಿದೆ.

ಮೇನಿಂದ ಆಗಸ್ಟ್​ವರೆಗೆ‌ ನಗರದಾದ್ಯಂತ ಬಿಬಿಎಂಪಿ ಅಧಿಕಾರಿಗಳು 12,203 ಮಂದಿಗೆ ಡೆಂಘೀ ಪರೀಕ್ಷೆ ನಡೆಸಿದ್ದು, ಎಂಟು ವಲಯಗಳಲ್ಲಿ 1,304 ಮಂದಿಗೆ ಡೆಂಘೀ ಕಾಣಿಸಿಕೊಂಡಿದೆ.

Related Stories

No stories found.
TV 5 Kannada
tv5kannada.com