Thursday, January 27, 2022

ಆಸ್ತಿ ವಿವಾದ: ಅಪರಿಚಿತನಿಂದ ಯುವಕನಿಗೆ ಚಾಕು ಇರಿತ

Must read

ಹುಬ್ಬಳ್ಳಿ: ಅಪಚಿತನೊಬ್ಬ ಯುವಕನಿಗೆ ಚಾಕು ಇರಿದಿರುವ ಘಟನೆ ಹಳೇ ಹುಬ್ಬಳ್ಳಿಯ ಕೃಷ್ಣಪೂರದಲ್ಲಿ ನಡೆದಿದೆ. ನಿತಿನ್ ಅರುಣ ಚಂದಡಕರ್ ಚಾಕು ಇರಿತಕ್ಕೊಳಗಾದ ಯುವಕ.

ನಿತಿನ್​ ಮೇಲೆ ಅಪರಿಚಿತನೊಬ್ಬ ಏಕಾಏಕಿ ದಾಳಿ ಮಾಡಿದ್ದು, ಮನಬಂದಂತೆ ಚಾಕು ಇರಿದು ಪರಾರಿಯಾಗಿದ್ದಾನೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ರೀತಿಯ ಹಲ್ಲೆ ನಡೆದಿದೆ ಎನ್ನುವುದು ನಿತಿನ್ ಕುಟುಂಬಸ್ಥರ ಆರೋಪವಾಗಿದೆ.

ಚಾಕು ಇರಿದ ಪರಿಣಾಮ ಯುವಕನಿಗೆ ಗಂಭಿರ ಗಾಯಗಳಾಗಿದ್ದು, ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest article