Thursday, January 20, 2022

ಮಾಸ್ಕ್ ದಂಡ ವಸೂಲಿ ಕೆಲಸವನ್ನು ಪೊಲೀಸರಿಗೆ ಹೊರೆಸಿದ ಪಾಲಿಕೆ..!

Must read

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೊನಾ ರೂಲ್ಸ್​​ ಬ್ರೇಕ್​ ಮಾಡುವವರಿಂದ ದಂಡ ವಸೂಲಿ ಮಾಡಲು ಪೊಲೀಸರನ್ನು ಬಳಸಿಕೊಳ್ಳಲಾಗುತ್ತಿದೆ.

ಮಾಸ್ಕ್ ದಂಡ ವಸೂಲಿ ಕೆಲಸದ ಬಗ್ಗೆ ಅವಳಿ‌ನಗರ ಪೊಲೀಸರು ಅಸಮಧಾನ ಹೊರಹಾಕಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ 40 ಜನ ಆರೋಗ್ಯ ನಿರೀಕ್ಷಕರು ಹಾಗೂ 100 ಜನ ಬಿಲ್ ಕಲೆಕ್ಟರ್ ಸೇರಿದಂತೆ ನೂರಾರು ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಾನಗರ ಪಾಲಿಕೆ ಸಿಬ್ಬಂದಿ ಮಾಡಬೇಕಿರುವ ಕೆಲಸವನ್ನು ಪೊಲೀಸರಿಗೆ ಹೊರೆಸಿದ್ದಾರೆ.

ಪೊಲೀಸರಿಗೆ ಒಂದೆಡೆ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ, ಮತ್ತೊಂದೆಡೆ ಮಾಸ್ಕ್ ದಂಡ ವಸೂಲಿ ಕೆಲಸವನ್ನು ಸಹ ಪಾಲಿಕೆ ಹೊರೆಸಿದೆ. ಹೀಗಾಗಿ ಎಲ್ಲದಕ್ಕೂ ಪೊಲೀಸರನ್ನು ಬಳಕೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪೊಲೀಸರು ತಮ್ಮ ಅಳಲು ತೋಡಿಕೊಂಡಿದ್ದಾರೆ. ದಂಡ ವಸೂಲಿಗೆ ಮಾರ್ಷಲ್​ಗಳನ್ನು ಕಣಕ್ಕೆ ಇಳಿಸದೇ ಪೊಲೀಸರಿಗೆ ಹೊರೆ ಹೊರೆಸಿದ ಪಾಲಿಕೆ ಈ ನಡೆಗೆ ಪೊಲೀಸ್ ಸಿಬ್ಬಂದಿ ಅಸಮಾಧಾನ ಹೊರಹಾಕಿದ್ದಾರೆ.

Latest article