Thursday, January 20, 2022

ಬೆಳೆ ವಿಮೆ ಕಂಪನಿ ವಿರುದ್ಧ ದೂರು ದಾಖಲಿಸಿದ ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ

Must read

ಹುಬ್ಬಳ್ಳಿ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿ ಐಸಿಐಸಿಐ ಲಂಬಾರ್ಡ್ ಜನರಲ್ ಇನ್ಸೂರೆನ್ಸ್‌ ಕಂಪನಿ ರೈತರಿಂದ ಕೋಟ್ಯಾಂತರ ರೂ. ಪಡೆದು ವಂಚಿಸಿದೆ ಎಂದು ಆರೋಪಿಸಿ ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಗೋಕುಲ ರಸ್ತೆ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ.

ಕಳೆದ 4 ವರ್ಷದಿಂದ ರೈತರು ಇನ್ನಿಲ್ಲದ ಸಂಕಷ್ಟವನ್ನ ಎದುರಿಸುತ್ತಿದ್ದಾರೆ. ನಿರಂತರ ಅತಿವೃಷ್ಟಿ ಒಂದು ಕಡೆಯಾದ್ರೆ, ಮತ್ತೊಂದು ಕಡೆ ಅಕಾಲಿಕ ಮಳೆಯ ಹೊಡೆತ. ಇವೆರಡರ ನಡುವೆ ಬೆಲೆಗಳ ಏರಿಳಿತ. ಇದೀಗ ಕೈಗೆ ಬಂದ ಫಸಲು ಇನ್ನೇನು ರೈತನ ಬಾಳನ್ನ ಹಸನಾಗಿಸಬೇಕಿತ್ತು. ಅಷ್ಟರಲ್ಲಿ ಅಕಾಲಿಕ ಮಳೆ ಬಂದು ಬೆಳೆಗಳು ಸಂಪೂರ್ಣ ನಾಶವಾಗಿವೆ.

ಬೆಳೆ ವಿಮೆಯಾದರೂ ಕೈಗೆ ಸಿಗುತ್ತೆ ಅಂದರೆ ಅದು ಸಹ ಸಿಗದೇ ರೈತ ಕಂಗಾಲಾಗಿದ್ದಾನೆ. ಆಯಾ ಬೆಳೆಗಳಿಗೆ ಅನುಗುಣವಾಗಿ ಪ್ರತಿ ಎಕರೆಗೆ ರೈತರು 4 ವರ್ಷದಿಂದ ವಿಮೆ ತುಂಬುತ್ತಿದ್ದಾರೆ. ಕಳೆದ ವರ್ಷ ಭಾರತಿ ಆಕ್ಸ ಕಂಪನಿ ಬೆಳೆ ವಿಮೆ ನೀಡೋದಾಗಿ ರೈತರಿಂದ ಹಣ ತುಂಬಿಸಿಕೊಂಡಿತ್ತು. ಆದರೆ, ಈ ಬಾರಿ ಐಸಿಐಸಿಐ ಲಂಬಾರ್ಡ್ ಜನರಲ್ ಇನ್ಸೂರೆನ್ಸ್‌ ಕಂಪನಿ ರೈತರಿಂದ ಕೋಟ್ಯಾಂತರ ರೂ. ಪಡೆದು ವಂಚಿಸಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

Latest article