Thursday, August 18, 2022

ಶಾಸಕಿಯ ಮೈದುನನಿಂದ ಗ್ರಾಮ ಪಂಚಾಯತಿ ಸದಸ್ಯನಿಗೆ ಧಮ್ಕಿ: ಆಡಿಯೋ ವೈರಲ್‌

Must read

ಹುಬ್ಬಳ್ಳಿ: ಶಾಸಕಿಯ ಮೈದುನ ಗ್ರಾಮ ಪಂಚಾಯತಿಯ ಸದಸ್ಯನಿಗೆ ಧಮ್ಕಿ ಹಾಕಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ನಡೆದಿದೆ.

ಗ್ರಾಮ ಪಂಚಾಯತಿ ಅಧ್ಯಕ್ಷ ಷಣ್ಮುಖ ಶಿವಳ್ಳಿ ಏಕ ಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿಯವರ ಮೈದುನ ಷಣ್ಮುಖ ಶಿವಳ್ಳಿ ಯರಗುಪ್ಪಿ ಗ್ರಾಮ ಪಂಚಾಯತಿ ಸದಸ್ಯನಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಗ್ರಾಮ ಪಂಚಾಯತಿ ಸದಸ್ಯರೋರ್ವರಿಗೆ ಮನಬಂದಂತೆ ಮಾತನಾಡಿರುವ ಆಡಿಯೋ ವೈರಲ್‌ ಆಗಿದೆ.

ಗ್ರಾಮ ಪಂಚಾಯತಿ ಸದಸ್ಯ ರವಿ ಕುಂಬಾರ ಎಂಬುವವರಿಗೆ ಮೊಬೈಲ್ ಕರೆ ಮಾಡಿ ಮಾತನಾಡಿರುವ ಷಣ್ಮುಖ ಶಿವಳ್ಳಿ, ಪಂಚಾಯತಿಗೆ ಕೊಡುತ್ತೇವೆ ಎಂದು ಹೇಳುವ ಮೂಲಕ ಅಧಿಕಾರದ ದರ್ಪ ತೋರಿಸಿದ್ದಾರೆ. ಶಾಸಕಿಯ ಮೈದುನ ಎಂದಾಕ್ಷಣ ಷಣ್ಮುಖ ಶಿವಳ್ಳಿ ಹೀಗೆ ವರ್ತನೆ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest article