ಹುಬ್ಬಳ್ಳಿ: ಹೈಕೋರ್ಟ್ ನ್ಯಾಯಾಧೀಶರಾದ ಬಿ.ವೀರಪ್ಪ ಹುಬ್ಬಳ್ಳಿ ಕಿಮ್ಸ್ ಗೆ ಭೇಟಿ ನೀಡಿ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಕಿಮ್ಸ್ ಟ್ರಾಮಾ ವಾರ್ಡ್ ಸರ್ಜರಿ, ಇಎನ್ಟಿ ವಾರ್ಡ್ಗಳು ಸೇರಿದಂತೆ ಹಲವು ವಾರ್ಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದರು. ನ್ಯಾಯಾಧೀಶರ ಎದುರು ಅಪಘಾತದಲ್ಲಿ ಅಂಗಹೀನರಾದ ರೋಗಿಗಳು ಕಣ್ಣೀರು ಹಾಕಿದರು.
ರೋಗಿಗಳೊಂದಿಗೆ ಮಾತನಾಡಿದ ಬಿ.ವೀರಪ್ಪ, ಉತ್ತರ ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ಇದಕ್ಕೆ ಸಂಚಾರ ನಿಯಮಗಳನ್ನು ಪಾಲಿಸದೆ ಇರುವುದೇ ಕಾರಣ. ಸಂಚಾರ ವಿಭಾಗ ಪೊಲೀಸರು ಈ ಬಗ್ಗೆ ಗಮನ ಹರಿಸಬೇಕು ಈ ಕುರಿತು ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದರು.