Friday, January 28, 2022

ಹುಬ್ಬಳ್ಳಿ: ಮೆಕ್ಕೆಜೋಳ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ

Must read

ಹುಬ್ಬಳ್ಳಿ: ಮೆಕ್ಕೆಜೋಳ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿಯಾಗಿರುವ ಘಟನೆ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ನವಲಗುಂದ ತಾಲೂಕಿನ ಬೆಳವಟಿಗಿ ಕ್ರಾಸ್ ಬಳಿ ನಡೆದಿದೆ.

ನರಗುಂದದಿಂದ ಹುಬ್ಬಳ್ಳಿಯತ್ತ ತೆರಳುತ್ತಿದ್ದ ಲಾರಿಯ ಇಂಜಿನ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಧಿಡೀರ್ ಬೆಂಕಿ ಹೊತ್ತಿಕೊಂಡ ಪರಿಣಾಮ ಚಾಲಕ ಲಾರಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

50 ಲಕ್ಷ ರೂ. ಮೌಲ್ಯದ ಗೋವಿನಜೋಳದೊಂದಿಗೆ ಶಿವಾನಂದ ಬೆಣ್ಣೆ ಎನ್ನುವವರಿಗೆ ಸೇರಿದ ಲಾರಿ ಸುಟ್ಟು ಭಸ್ಮವಾಗಿದೆ.

Latest article