Friday, January 28, 2022

ಧಾರವಾಡ ಡಿಸಿಯಿಂದ ರೂಲ್ಸ್​ ಬ್ರೇಕ್: ನೈಟ್​ ಕರ್ಫ್ಯೂ ಜಾರಿಯಲ್ಲಿದ್ರೂ ಅದ್ದೂರಿ ಬರ್ತ್ ಡೇ ಸೆಲೆಬ್ರೆಷನ್​

Must read

ಹುಬ್ಬಳ್ಳಿ: ಧಾರವಾಡದಲ್ಲಿ ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕಾದ ಜಿಲ್ಲಾಧಿಕಾರಿಯೇ ನಿಯಮ ಉಲ್ಲಂಘಿಸಿದ್ದಾರೆ. ನೈಟ್​ ಕರ್ಫ್ಯೂ ಜಾರಿಯಲ್ಲಿದ್ದರೂ ನಿವಾಸ ಗೇಟ್​ ಹಾಕಿಕೊಂಡು ಅದ್ದೂರಿಯಾಗಿ ಮಗನ ಬರ್ತ್​ ಡೇ ಆಚರಿಸಿದ್ದಾರೆ.

ಕೋವಿಡ್​ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ ರಾತ್ರಿ 10 ರಿಂದ ಬೆಳಗ್ಗೆ 5ಗಂಟೆ ವರೆಗೆ ನೈಟ್​ ಕರ್ಫ್ಯೂ ವಿಧಿಸಿದೆ. ಆದರೆ, ಸರ್ಕಾರದ ಕಾನೂನು ಪಾಲನೆ ಮಾಡಬೇಕಾದ ಧಾರವಾಡ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್​ ಅವರೇ ನಿಯಮವನ್ನು ಉಲ್ಲಂಘಿಸಿದ್ದಾರೆ. ರಾತ್ರಿ 11 ಘಂಟೆಯಾದರೂ ಕೂಡ ಮಗನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಎಲ್ಲಾ ತಾಲೂಕು ತಹಶೀಲ್ದಾರ್​ಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದಾರೆ. ಬರ್ತ್​ ಡೇ ಸೆಲೆಬ್ರೆಷನ್​ನಲ್ಲಿ ಮಾಸ್ಕ್​ ಧರಿಸಿಲ್ಲ, ಅಂತರ ಕಾಯ್ದುಕೊಂಡಿಲ್ಲ. ಇದರಿಂದ ಅಧಿಕಾರಿಗೊಂದು ನ್ಯಾಯ, ಜನಸಾಮಾನ್ಯರಿಗೊಂದು ನ್ಯಾಯವೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

 

Latest article