ಹುಬ್ಬಳ್ಳಿ: ಯುವತಿ ಕಿಡ್ನ್ಯಾಪ್ ಪ್ರಕರಣ ಸಂಬಂಧ ಕಾರ್ಪೋರೇಟರ್ ಚೇತನ ಹೀರೇಕೆರೂರ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಖಿಲ್ ದಾಂಡೇಲಿ ಹಾಗೂ ಸಹನಾ ದಾಖಲಿಸಿರುವ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸುವಂತೆ ಕೋರ್ಟ್ ಆದೇಶ ಹೊರಡಿಸಿತ್ತು. ಯುವತಿ ಅಪಹರಣ ಪ್ರಕರಣದಲ್ಲಿ ಕಳೆದ ಹಲವು ದಿನಗಳಿಂದ ಚೇತನ ಹೀರೇಕೆರೂರ್ನನ್ನು ಕೊನೆಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಸದ್ಯ ಚೇತನ ಹೀರೇಕೆರೂರ ಹಾಗೂ ಶಿವು ಹೀರೇಕೆರೂರ ಹಾಗೂ ಶಿವು ಹೀರೇಕೆರೂರ ಪತ್ನಿ ಜಯಲಕ್ಷ್ಮೀ ಅವರನ್ನು ಗೋಕುಲ್ ರೋಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.