Sunday, October 2, 2022

ಮುಂಡಗೋಡ ಪೊಲೀಸರ ಕಾರ್ಯಾಚರಣೆ: ಮನೆಯಲ್ಲೇ ಗಾಂಜಾ ಗಿಡ ಬೆಳೆದ ಆರೋಪಿ ಅರೆಸ್ಟ್​

Must read

ಹುಬ್ಬಳ್ಳಿ: ಮನೆಯಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಹುಬ್ಬಳ್ಳಿ ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.

ನ್ಯಾಮಗಲ್ ಚೋಟೆನ್ ಬಂಧಿತ ಆರೋಪಿ.

ಮುಂಡಗೋಡ ಪೊಲೀಸ್ ಇನ್ಸ್​​ಪೆಕ್ಟರ್​​ ಸಿದ್ದಪ್ಪ ಸಿಮಾನಿ ನೇತೃತ್ವದ ತಂಡ ತಾಲೂಕಿನ ಟಿಬೆಟಿಯನ್ 4 ನಂಬರ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದು, ಮನೆಯ ಹಿಂದೆ ಗಾಂಜಾ ಗಿಡಗಳನ್ನು ಬೆಳೆದಿದ್ದ ನ್ಯಾಮಗಲ್ ಚೋಟೆನ್​ ನನ್ನು ಬಂಧಿಸಿದ್ದಾರೆ.

ಆರೋಪಿ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಿಂದ ಬರೋಬ್ಬರಿ ಏಳು ಕೆಜಿಯಷ್ಟು ಹಸಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Latest article