Friday, January 21, 2022

ಹುಬ್ಬಳ್ಳಿ ವ್ಯಕ್ತಿಗೆ 32 ಲಕ್ಷ ರೂ. ವಂಚನೆ: ಸೈಬರ್​ ಠಾಣೆಯಲ್ಲಿ ದೂರು ದಾಖಲು

Must read

ಹುಬ್ಬಳ್ಳಿ: ಫ್ಲಿಪ್​ಕಾರ್ಟ್ ಕಂಪನಿಯ ಪ್ರಾಜೆಕ್ಟ್​ಗಳಲ್ಲಿ ಬಂಡವಾಳ ಹೂಡಿಕೆ ಮಾಡಿ ಎಂದು ನಂಬಿಸಿ ವಂಚಿಸಿರುವ ಕುರಿತು ಹುಬ್ಬಳ್ಳಿಯ ಸೈಬರ್​ ಕ್ರೈಮ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಹುಬ್ಬಳ್ಳಿಯ ಗುರುಮೂರ್ತಿ ನಾಣ್ಯದ ಎಂಬ ಉದ್ಯಮಿಗೆ 32 ಲಕ್ಷ ರೂ. ವಂಚನೆ ಮಾಡಲಾಗಿದೆ. ಗುರುಮೂರ್ತಿಯವರಿಗೆ ಕರೆ ಮಾಡಿದ ಲಕ್ಷ್ಮಿ ಮೇಹರ್ ಎಂಬ ಮಹಿಳೆ, ಫ್ಲಿಪ್​ಕಾರ್ಟ್ ಕಂಪನಿಯ ಪ್ರಾಜೆಕ್ಟ್​ಗಳಲ್ಲಿ ಬಂಡವಾಳ ಹೂಡಿಕೆ ಮಾಡಿ ಲಕ್ಷ-ಲಕ್ಷ ಹಣ ಗಳಿಸಬಹುದು ಎಂದು ನಂಬಿಸಿದ್ದಾಳೆ.

ಬಳಿಕ ಹಂತ-ಹಂತವಾಗಿ ಒಟ್ಟು 32 ಲಕ್ಷ ರೂ. ಖಾತೆಯಿಂದ ವರ್ಗಾಯಿಸಿಕೊಂಡು ವಂಚಿಸಿದ್ದಾಳೆ. ಹಣ ಕಳೆದುಕೊಂಡು ಉದ್ಯಮಿ ಇದೀಗ ಹುಬ್ಬಳ್ಳಿಯ ಸೈಬರ್​ ಕ್ರೈಮ್​ ಠಾಣೆಯ ಮೆಟ್ಟಿಲೇರಿದ್ದಾರೆ.

Latest article