Tuesday, August 16, 2022

ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಸರ್ಕಾರ ಮತ್ತೆ ಈ ರಾಜ್ಯದಲ್ಲಿ ಬರಬೇಕು: ಎಂ.ಬಿ.ಪಾಟೀಲ್

Must read

ದಾವಣಗೆರೆ: ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಸರ್ಕಾರ ಏನಿತ್ತು, ಅಂತಹ ಸರ್ಕಾರ ಮತ್ತೆ ಈ ರಾಜ್ಯದಲ್ಲಿ ಬರಬೇಕು. ಈ ರಾಜ್ಯ ಸಮೃದ್ಧಿ ಆಗಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐತಿಹಾಸಿಕ ದಾವಣಗೆರೆ ನಗರದಲ್ಲಿ ನಮ್ಮೆಲ್ಲರ ನೆಚ್ಚಿನ ನಾಯಕರು, ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರು, ಬಡವರ ಬಗ್ಗೆ, ರೈತರ ಬಗ್ಗೆ ಅತ್ಯಂತ ಕಾಳಜಿಯನ್ನು ಹೊಂದಿದಂತಹ ನಾಯಕರಾದಂತಹ ಸನ್ಮಾನ್ಯ ಸಿದ್ದರಾಮಯ್ಯ ಸಾಹೇಬರ 75ನೇಯ ಜನ್ಮ ದಿನೋತ್ಸವ, ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಪ್ರಪ್ರಥಮ ಬಾರಿಗೆ ಸಿದ್ದರಾಮಯ್ಯನವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರುತ್ತೇನೆ. ಅದೇ ರೀತಿ ಅವರಿಗೆ ದೇವರು ಆಯುಷ್ಯ, ಆರೋಗ್ಯ, ಯಶಸ್ಸನ್ನು ಕೊಡಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.

ಇವನ್ನು ಕರ್ನಾಟಕ ರಾಜ್ಯ ಕಂಡಂತಹ ಓರ್ವ ಶ್ರೇಷ್ಠ ರಾಜಕಾರಣಿ ಸನ್ಮಾನ್ಯ ಸಿದ್ದರಾಮಯ್ಯನವರು. ಗ್ರಾಮೀಣ ಹಿನ್ನೆಲೆಯಲ್ಲಿ ಬಂದು, ಹಣಕಾಸಿನ ಸಚಿವರಾಗಿ ಬಂದು, ಹೋರಾಟದ ಹಿನ್ನೆಲೆಯಲ್ಲಿ ಬಂದು ಇವತ್ತು ರಾಜ್ಯದ ಮುಖ್ಯಮಂತ್ರಿಗಳಾಗಿ 5 ವರ್ಷ ಮಾದರಿ ಸರ್ಕಾರವನ್ನು ಕೊಟ್ಟವರು ಸನ್ಮಾನ್ಯ ಸಿದ್ದರಾಮಯ್ಯನವರು. ಅಧಿಕಾರ ವಹಿಸಿಕೊಂಡ ಕೂಡಲೇ ರಾಜ್ಯದ ಒಬ್ಬೇ ಒಬ್ಬರು ಹಸಿವಿನಿಂದ ಮಲಗಬಾರದು ಅಂತ ಹೇಳಿ ಅನ್ನಭಾಗ್ಯ ಯೋಜನೆಯನ್ನು ಕೊಟ್ಟಂಥವರು. ಸುಮಾರು 4 ಕೋಟಿ ಜನರಿಗೆ. ಮಕ್ಕಳಿಗೆ ಕ್ಷೀರಭಾಗ್ಯ, ಕೃಷಿಭಾಗ್ಯ ಹೀಗೆ ನೀರಾವರಿಗೆ ಸುಮಾರು 50 ಸಾವಿರ ಕೋಟಿ ಕೊಟ್ಟರು.

5 ವರ್ಷ ಸುಭದ್ರವಾದಂತಹ ಸರ್ಕಾರವನ್ನು ಕೊಡುವುದರ ಜೊತೆಗೆ ಭ್ರಷ್ಟಾಚಾರ ರಹಿತವಾದಂತಹ ಒಂದು ಸರ್ಕಾರವನ್ನು ಕೊಟ್ಟು 168 ಭರವಸೆಗಳನ್ನು ಈಡೇರಿಸಿದವರು ನಮ್ಮ ನಾಯಕರಾದಂತಹ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು. ಆಗ ಎಂದತಹ ಒಂದು ಸಮೃದ್ಧಿಯ ಸರ್ಕಾರವಿತ್ತು. ಈಗ 40 ಪರ್ಸೆಂಟ್​ ಸರ್ಕಾರ. ಪೊಲೀಸ್ ಹಗರಣ, ಬೆಲೆ ಏರಿಕೆ ಇಂತಹ ಒಂದು ಸಂದರ್ಭದಲ್ಲಿ ಕರ್ನಾಟಕ ಜನತೆ ಬಯಸುತ್ತಿದೆ. ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಸರ್ಕಾರ ಏನಿತ್ತು, ಅಂತಹ ಸರ್ಕಾರ ಮತ್ತೆ ಈ ರಾಜ್ಯದಲ್ಲಿ ಬರಬೇಕು. ಈ ರಾಜ್ಯ ಸಮೃದ್ಧಿ ಆಗಬೇಕು ಎಂದರು.

 

Latest article