Thursday, January 27, 2022

TV ನೋಡಲು ಬಂದ ಅಪ್ರಾಪ್ತೆಗೆ ಲೈಂಗಿಕ ‌ಕಿರುಕುಳ: ಯುವಕ ಅರೆಸ್ಟ್​​

Must read

ಮಂಗಳೂರು: ಟಿ.ವಿ‌ ನೋಡಲು ಬಂದ ಅಪ್ರಾಪ್ತೆಗೆ ಲೈಂಗಿಕ ‌ಕಿರುಕುಳ ನೀಡಿದ ಆರೋಪದ ಮೇಲೆ ಮಂಗಳೂರಿನ ಯುವಕನನ್ನು ಬಂಧಿಸಲಾಗಿದೆ. ನಿತೇಶ್ ರಿತಿನ್ ಅಲಿಯಾಸ್​​ ನಿತಿನ್(19) ಬಂಧಿತ ಆರೋಪಿ.

ಶಾಲೆ ಮುಗಿಸಿ ಟಿ.ವಿ ನೋಡಲು ಮನೆಗೆ ಬಂದಿದ್ದ ಬಾಲಕಿಗೆ ನಿತಿನ್‌ ಲೈಂಗಿಕ ‌ಕಿರುಕುಳ ನೀಡಿದ್ದಲ್ಲದೇ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸಾಯಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಮಂಗಳೂರು ನಗರದ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಐಪಿಸಿ 354,447,506 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Latest article