ಮಂಗಳೂರು: ಮಹಿಳೆಯೊಬ್ಬರಿಂದ 3 ಲಕ್ಷ ರೂಪಾಯಿ ಸಾಲ ಪಡೆದು ಮರುಪಾವತಿಸದೇ ವಂಚಿಸಿರುವ ಮಂಗಳೂರು ಹೊರವಲಯದ ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿರುದ್ಧ 5ನೇ ಜೆಎಂಎಫ್ ನ್ಯಾಯಾಲಯದಿಂದ ಬಂಧನದ ವಾರೆಂಟ್ ಜಾರಿಯಾಗಿದೆ.
ಗ್ರಾ.ಪಂ. ಅಧ್ಯಕ್ಷೆ ಚಂಚಲಾಕ್ಷಿಯವರು ಸ್ನೇಹಿತೆ ಶೈನಿ ಎಂಬುವವರಿಂದ 3 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಬಳಿಕ ಸಾಲ ಮರುಪಾವತಿಸದೇ ವಂಚಿಸಿದ್ದರು. 2019ರಲ್ಲಿ ಶೈನಿಯವರು ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್ ವಿಚಾರಣೆಗೆ ಕರೆದರೂ ಅಧ್ಯಕ್ಷೆ ಚಂಚಲಾಕ್ಷಿ ಹಾಜರಾಗಿರಲಿಲ್ಲ. ನಂತರ ಕೋರ್ಟ್ನಿಂದ ಸಮನ್ಸ್ ಜಾರಿಯಾದರೂ ಕ್ಯಾರೇ ಎಂದಿರಲಿಲ್ಲ.
ಹೀಗಾಗಿ, 5ನೇ ಜೆಎಂಎಫ್ ನ್ಯಾಯಾಲಯದಿಂದ ಬಂಧನದ ವಾರೆಂಟ್ ಜಾರಿಯಾಗಿದ್ದು, ಆರೋಪಿ ಬಂಧಿಸಿ ಕರೆ ತರುವಂತೆ ಕೊಣಾಜೆ ಪೋಲಿಸರಿಗೆ ಸೂಚಿಸಲಾಗಿದೆ.