Thursday, October 6, 2022

ಪ್ರತಿಭಟನಾನಿರತ ವಿದ್ಯಾರ್ಥಿನಿಯರು ಮೊದಲು ತರಗತಿಯಲ್ಲಿ ಹಿಜಾಬ್ ಧರಿಸುತ್ತಿರಲಿಲ್ಲ: ಸಹಪಾಠಿ ಹೇಳಿಕೆ

Must read

ಉಡುಪಿ: ಧರಣಿ ನಡೆಸುತ್ತಿರುವ ವಿದ್ಯಾರ್ಥಿನಿಯರು ಹಿಂದೆ ತರಗತಿಯಲ್ಲಿ ಹಿಜಾಬ್ ಧರಿಸುತ್ತಿರಲಿಲ್ಲ. ಈಗ ಸುಮ್ಮನೆ ವಿವಾದ ಸೃಷ್ಟಿ ಮಾಡಿದ್ದಾರೆ ಎಂದು ಉಡುಪಿ ಪಿಯು ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ಸಹಪಾಠಿ ಹೇಳಿಕೆ ನೀಡಿದ್ದಾಳೆ.

ಉಡುಪಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ, ಎಬಿವಿಪಿ ಪ್ರತಿಭಟನೆ ಅಂತ ಗೊತ್ತಿದ್ದರೂ ಅವರು ಭಾಗವಹಿಸಿದ್ದಾರೆ. ಕೆಲ ವಿದ್ಯಾರ್ಥಿನಿಯರು ತರಗತಿಗೂ ಸರಿಯಾಗಿ ಹಾಜರಾಗುತ್ತಿರಲಿಲ್ಲ. ವಿವಾದ ನಂತರ ನಮ್ಮ ಜೊತೆಗೆ ಸಂಪರ್ಕವಿಲ್ಲ.

ಈ ವಿವಾದದಿಂದ ನಮ್ಮ ತರಗತಿಗೆ ತೊಂದರೆ ಆಗುತ್ತಿದೆ. ವಿವಾದ ಮುಗಿದ ಬಳಿಕ ಮತ್ತೆ ಕ್ಲಾಸ್​ಗೆ ಬಂದ್ರೆ ನಾವು ಹಿಂದಿನಂತೆ ಸಹಪಾಠಿಯಾಗಿ ಇರುತ್ತೇವೆ ಎಂದಿದ್ದಾಳೆ.

 

Latest article