Wednesday, May 18, 2022

ಪ್ರತಿಭಟನೆ ವೇಳೆ ಮೃತರಾದ ರೈತರಿಗೆ ಪರಿಹಾರ ನೀಡಬೇಕು-ಯು.ಟಿ ಖಾದರ್

Must read

ಮಂಗಳೂರು: ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಯನ್ನು ಹಿಂಪಡೆದ ವಿಚಾರವಾಗಿ ಮಾಜಿ ಸಚಿವ ಯು.ಟಿ ಖಾದರ್ ಮಾತನಾಡಿದ್ದು, ಪ್ರತಿಭಟನೆ ವೇಳೆ ಮೃತರಾದ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಈ ಕಾಯ್ದೆಯನ್ನು ಮೊದಲೇ ವಿರೋಧಿಸಿದ್ದರು. ಆಗಲೇ ಈ ಕಾನೂನನ್ನು ಸರ್ಕಾರ ಹಿಂಪಡೆಯುತ್ತದೆ ಎಂದು ಹೇಳಿದ್ದರು. ಈಗ ರಾಹುಲ್ ಗಾಂಧಿ ಹೇಳಿದ ರೀತಿಯೇ ಆಗಿದೆ ಎಂದರು.

ಇನ್ನು ಸರ್ಕಾರ ರೈತ ಹೋರಾಟಕ್ಕೆ ಮಣಿದು ಕಾಯಿದೆ ಹಿಂಪಡೆದಿದೆ. ಒಂದು ವರ್ಷ ಎರಡು ತಿಂಗಳು ರೈತರ ಹೋರಾಟದ ಬಳಿಕ ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆದಿದೆ. ಈ ಅವಧಿಯಲ್ಲಿ ಶ್ರೀಮಂತರ ಮಾಡಿದ ಲಾಭ ಎಷ್ಟು..? ಸರ್ಕಾರ ಒಂದು ವರ್ಷದ ಬಳಿಕ ಕಾಯ್ದೆ ಹಿಂಪಡೆದದ್ದು ಯಾಕೆ..? ಈ ಬಗ್ಗೆ ಸರ್ಕಾರ ಜನರೆದುರು ಮಾಹಿತಿ ಬಹಿರಂಗಗೊಳಿಸಬೇಕು. ಅಲ್ಲದೇ ರೈತ ಪ್ರತಿಭಟನೆ ವೇಳೆ ಮೃತರಾದ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Latest article