ಮಂಗಳೂರು: ಕೊಲೆಗೆ ಸ್ಕೆಚ್ ಪ್ರಕರಣಕ್ಕೆ ಸಂಬಂಧಿಸಿಸಂತೆ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ, ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತ ಗುಣರಂಜನ್ ಶೆಟ್ಟಿ ಇಂದು ವಿಚಾರರಣೆಗೆ ಆಗಮಿಸಿದ್ದಾರೆ.
ಕೊಲೆಗೆ ಸ್ಕೆಚ್ ಪ್ರಕರಣಕ್ಕೆ ಸಂಬಂಧಿಸಿಸಂತೆ ವಿಚಾರಣೆಗೆ ಹಾಜರಾಗುವಂತೆ ಮಂಗಳೂರು ಪೊಲೀಸರು ಗುಣರಂಜನ್ ಶೆಟ್ಟಿಗೆ ನೋಟಿಸ್ ನೀಡಿದ್ದರು. ನೋಟಿಸ್ ಹಿನ್ನೆಲೆಯಲ್ಲಿ ಗುಣರಂಜನ್ ಶೆಟ್ಟಿ ಮೊದಲು ಮಂಗಳೂರು ಸಿಸಿಬಿಯಲ್ಲಿ ವಿವರಣೆ ನೀಡಿದ್ದಾರೆ. ಗುಣರಂಜನ್ ಶೆಟ್ಟಿಯಿಂದ ಪ್ರಕರಣ ಹಾಗೂ ಭೂಗತ ಪಾತಕಿಗಳ ಬಗ್ಗೆ ಸಿಸಿಬಿ ವಿವರಣೆ ಪಡೆದಿದೆ. ಬಳಿಕ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಗುಣರಂಜನ್ ಶೆಟ್ಟಿ ವಿಚಾರಣೆಗೆ ಹಾಜರಾಗಿದ್ದಾರೆ. ಕಮಿಷನರ್ ಎನ್.ಶಶಿಕುಮಾರ್ ದೂರಿನ ಬಗ್ಗೆ ವಿವರಣೆ ಪಡೆದಿದ್ದಾರೆ.
ಘಟನೆ ಹಿನ್ನೆಲೆ: ಜೂನ್ 12ರಂದು ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ, ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ನಡೆದಿರುವ ಬಗ್ಗೆ ವದಂತಿ ಕೇಳಿಬಂದಿತ್ತು. ಮುತ್ತಪ್ಪ ರೈ ಸಂಬಂಧಿ ಮನ್ಮಿತ್ ರೈನಿಂದ ಕೊಲೆಗೆ ಸ್ಕೆಚ್ ಎಂಬ ವದಂತಿ ಕೇಳಿಬಂದಿತ್ತು. ಮನ್ಮಿತ್ ರೈ, ಮುತ್ತಪ್ಪ ರೈ ಹತ್ತಿರದ ಸಂಬಂಧಿಯಾಗಿದ್ದು, ಗುಣರಂಜನ್ ಶೆಟ್ಟಿ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ.
ಗುಣರಂಜನ್ ಶೆಟ್ಟಿ ಹಾಗೂ ಮನ್ಮಿತ್ ರೈ ಇಬ್ಬರು ಮುತ್ತಪ್ಪ ರೈ ಜೊತೆಗೆ ಇದ್ದರು. ನಂತರ ಮುತ್ತಪ್ಪ ರೈ ಬಳಗದಿಂದ ಮನ್ಮಿತ್ ರೈ ಹೊರಬಂದಿದ್ದರು. ಜೂನ್ 12ರಂದು ತನಗೆ ಕೊಲೆ ಬೆದರಿಕೆ ಇದೆ ಎಂದು ಗುಣರಂಜನ್ ಶೆಟ್ಟಿ ಆರೋಪಿಸಿದ್ದರು. ಈ ಬಗ್ಗೆ ಜಯ ಕರ್ನಾಟಕ ಸಂಘಟನೆ ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ದೂರು ನೀಡಿತ್ತು.