Tuesday, August 16, 2022

ಕರ್ತವ್ಯ ಲೋಪ: ಮಂಗಳೂರು ಮಹಿಳಾ ಠಾಣೆಯ ಪಿಎಸ್​ಐ ಅಮಾನತು

Must read

ಮಂಗಳೂರು: ಪೋಕ್ಸೋ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ಆರೋಪದ ಹಿನ್ನಲೆಯಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಪಿಎಸ್​ಐ ಅವರನ್ನು ಅಮಾನತು ಮಾಡಲಾಗಿದೆ.

ರೋಸಮ್ಮ ಅಮಾನತ್ತಾದ ಮಹಿಳಾ ಪಿಎಸ್​ಐ. ಕಳೆದ ಜುಲೈ 27ರಂದು ಕಂಕನಾಡಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿಯಾಗಿ ರೋಸಮ್ಮ ಅವರನ್ನು ನೇಮಿಸಲಾಗಿತ್ತು.

ಆದರೆ, ಪಿಎಸ್​ಐ ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪ ಎಸಗಿರುವ ಕುರಿತು ಕೇಂದ್ರ ಉಪವಿಭಾಗ ಎಸಿಪಿ ಕಮಿಷನರ್​ಗೆ ವರದಿ ಸಲ್ಲಿಸಿತ್ತು. ವರದಿ ಆಧರಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಪಿಎಸ್ಐ ಅನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Latest article