Wednesday, June 29, 2022

ಕೈಗಾರಿಕಾ ವಲಯ ಸ್ಥಾಪಿಸಲು 3 ಗ್ರಾಮ ಖಾಲಿ ಮಾಡುವಂತೆ ಆದೇಶ: ನಾಳೆ ಬೃಹತ್​ ಪ್ರತಿಭಟನೆ

Must read

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು ಮೂರು ಊರುಗಳನ್ನೇ ಖಾಲಿ ಮಾಡುವಂತೆ ಅಧಿಕಾರಿಗಳು ಆದೇಶ ಹೊರಡಿಸಿದ್ದು, ಗ್ರಾಮದ ನಿವಾಸಿಗಳು ಕಂಗಲಾಗಿದ್ದಾರೆ.

ಕೈಗಾರಿಕಾ ವಲಯ ಸ್ಥಾಪಿಸಲು ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪದ ಉಳೆಪಾಡಿ, ಬಳ್ಕುಂಜೆ ಹಾಗೂ ಕೊಲ್ಲೂರು ಗ್ರಾಮಗಳನ್ನು ಒಕ್ಕಲೆಬ್ಬಿಸಲು ಆದೇಶ ಹೊರಡಿಸಲಾಗಿದೆ.

ಕಳೆದ ಮೂರು ವಾರದಿಂದ ಮೂರೂ ಗ್ರಾಮಗಳ ಮನೆಮನೆಗೂ ಕೆಐಎಡಿಬಿ ನೋಟಿಸ್ ನೀಡಿದ್ದು, ಕೈಗಾರಿಕೆ ವಲಯಕ್ಕೆ ಊರು ಬಿಟ್ಟು ಕೊಡುವುದಿಲ್ಲ ಎಂದು ನಿವಾಸಿಗಳು ಪಟ್ಟುಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ಗ್ರಾಮದ ಗ್ರಾಮಸ್ಥರು ನಾಳೆ ಬೃಹತ್ ಪ್ರತಿಭಟನೆ ಮುಂದಾಗಿದ್ದು, 1091 ಎಕರೆಯಷ್ಟು ಜನವಸತಿ ಪ್ರದೇಶ, ಕೃಷಿ ಭೂಮಿ ಕೈಗಾರಿಕಾ ವಲಯದಡಿ ಸಮಾಧಿಯಾಗಲಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

Latest article