Friday, January 21, 2022

ಪಿಲಿಕುಳ ಉದ್ಯಾನವನದಲ್ಲಿ ಏಕಾಏಕಿ ಕುಸಿದು ಬಿದ್ದು 9 ವರ್ಷದ ಹುಲಿ ಸಾವು

Must read

ಮಂಗಳೂರು: ಇಲ್ಲಿನ ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿದ್ದ 9 ವರ್ಷದ ಹುಲಿ ಮೃತಪಟ್ಟಿದೆ.

ಆರೋಗ್ಯವಂತ ಹಾಗೂ ಸದೃಢವಾಗಿದ್ದ ಒಲಿವರ್ ಎಂಬ ಹೆಸರಿನ ಹುಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದೆ. ಮೃತಪಟ್ಟ ಹುಲಿಯ ಅಂಗಾಂಗ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರು ಹಾಗೂ ಭೋಪಾಲ್ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಒಲಿವರ್ ಮೃತಪಟ್ಟ ಹಿನ್ನೆಲೆಯಲ್ಲಿ ಜೈವಿಕ ಉದ್ಯಾನವನದಲ್ಲಿನ ಪ್ರಾಣಿಗಳ ಪ್ರತಿ ಬ್ಯಾರಕ್​ಗಳಿಗೆ ರೋಗ ನಿರೋಧಕ ದ್ರಾವಣ ಸಿಂಪಡಣೆ ಮಾಡಲಾಗಿದೆ.

Latest article