Thursday, January 27, 2022

ಬಿಜೆಪಿಯ ಯುವ ನಾಯಕ ಮಹಮ್ಮದ್ ಅಸ್ಗರ್​ ಪಕ್ಷದಿಂದ ಅಮಾನತು

Must read

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದ ಪಜೀರು ಗ್ರಾಮದ ಸಾಂಬಾರ್ ತೋಟ ಬೂತ್​ ಅಧ್ಯಕ್ಷ ಹಾಗೂ ಬಿಜೆಪಿಯ ಯುವ ನಾಯಕ ಮಹಮ್ಮದ್ ಅಸ್ಗರ್​ನನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ತುಳುನಾಡ ಆರಾಧ್ಯದೈವ ಕೊರಗಜ್ಜನಿಗೆ ಅವಮಾನ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಆರೋಪಿಯ ಸಹೋದರನನ್ನು ಬಿಡುಗಡೆಗೊಳಿಸಲು ಮಹಮ್ಮದ್ ಅಸ್ಗರ್​ ಒತ್ತಡ ಹಾಕಿರುವ ಆರೋಪದ ಮೇರೆಗೆ ದಕ್ಷಿಣ ಕನ್ನಡ ಬಿಜೆ‌ಪಿ ಜಿಲ್ಲಾಧ್ಯಕ್ಷ ಸುದರ್ಶನ್.ಎಂ ಅಮಾನತುಗೊಳಿಸಿ ಆದೇಶೀಸಿದ್ದಾರೆ.

ಪಕ್ಷದ ಶಿಸ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

 

Latest article