Thursday, May 19, 2022

ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ – ಮಾಜಿ ಸಚಿವ ಯು.ಟಿ ಖಾದರ್ ಪ್ರಶ್ನೆ

Must read

ಮಂಗಳೂರು: ಮತಾಂತರ ಕಾಯ್ದೆ ಎನ್ನುವುದು ಈಗಾಗಲೇ ನಮ್ಮಲ್ಲಿದೆ ಈ ಕಾಯ್ದೆಯನ್ನು ಬಲಿಷ್ಠಗೊಳಿಸಲು ಬಿಜೆಪಿ ಏನು ಮಾಡಿದೆ(?) ಎಂದು ಮಾಜಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮ ಜೊತೆ ಮಾತನಾಡಿದ ಅವರು, ಜಿಹಾದ್ ಎಂಬ ಅರೆಬಿಕ್ ಶಬ್ದ ಯಾಕೆ ಬಳಸುವುದು(?) ಕಾನೂನಿನ ಹಿಂದೆ ಉದ್ದೇಶ ಇರಬೇಕು, ದುರುದ್ದೇಶ ಇರಬಾರದು. ನಮ್ಮಲ್ಲಿ ಜಾರಿಯಾಗುವ ಕಾನೂನಿಗೆ ವಿದೇಶಿ ಹೆಸರು ಯಾಕೆ ಬೇಕು(?) ದೇಶದಲ್ಲಿ ಕಾನೂನು ಮಾಡುವಾಗ ಅರೆಬಿಕ್ ಪದ ಬಂದಿದ್ಯಾ(?) ಇವರೆಲ್ಲಾ ಕೂತು ನಾಟಕ ಮಾಡುವುದೇ(?) ಎಂದು ಆಡಳಿತ ಪಕ್ಷಕ್ಕೆ ಪ್ರಶ್ನೆ ಮಾಡಿದ್ದಾರೆ.

ಸದ್ಯ ಎಪಿಎಂಸಿ ಕಾನೂನು ರಾತ್ರಿ ಬೆಳಗಾಗುವುದರೊಳಗೆ ತಂದಿದ್ದೀರಿ. ನಿಮಗೆ ಎಲ್ಲಾ ಕಾನೂನನ್ನು ರಾತ್ರಿ ಬೆಳಗಾಗುವುದರೊಳಗೆ ಜಾರಿಗೆ ತರಲಾಗುತ್ತದೆ. ಆದರೆ, ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ(?) ಎಂದಿದ್ದಾರೆ.

ಇನ್ನು ರಾಜ್ಯದಲ್ಲೀಗ ನಿಮ್ಮದೇ ಸರ್ಕಾರವಿದೆ, ಹೀಗಿರುವಾಗ ತಡ ಯಾಕೆ(?) ಗೋ ಹತ್ಯೆ ನಿಷೇಧ ಕಾನೂನು ಬಗ್ಗೆ ಎರಡು ತಿಂಗಳಿನಿಂದ ಬರೀ ಚರ್ಚೆ ಯಾಕೆ(?) ಈ ಬಗ್ಗೆ ಸಂಪುಟ ಪ್ರಸ್ತಾಪ ಮಾಡಿ, ಚರ್ಚಿಸಿ. ಬಿಜೆಪಿ ಸರ್ಕಾರ ಬಂದ ಬಳಿಕ ಭಾರತದಿಂದಲ್ಲೇ ವಿದೇಶಗಳಿಗೆ ಹೆಚ್ಚು ಗೋ ಮಾಂಸ ರಫ್ತಾಗುತ್ತಿದೆ. ಗೋ ಹತ್ಯೆ ತಡೆಯುವ ಕಾನೂನು ಇಂದಿರಾ ಗಾಂಧಿ ತಂದಿರುವುದೇ ಹೊರತು ಬಿಜೆಪಿ ಅಲ್ಲ ಎಂದು ಕಾಂಗ್ರೆಸ್​ ಶಾಸಕ ಯು.ಟಿ ಖಾದರ್ ಅವರು ಮಾತನಾಡಿದರು.

Latest article