Thursday, January 20, 2022

ಕೆಲಸದ ನಿಮಿತ್ತ ಹೊರ ಹೋಗಿದ್ದ ಪತಿ, ಅಂದು ರಾತ್ರಿ ಮನೆಗೆ ಬಂದಾಗ ಪಕ್ಕದ ಮನೆಯವನ ಜೊತೆ ಪತ್ನಿಯ ಲವ್ವಿ ಡವ್ವಿ, ಮುಂದೆ ನಡೆದದ್ದು ಘನ ಘೋರ!

Must read

ಲಖಿಸರಾಯ್: ಬಿಹಾರದ ಲಖಿಸರಾಯ್ನಲ್ಲಿ ಅಕ್ರಮ ಸಂಬಂಧದ ಕಾರಣದಿಂದ ಕೊಲೆಯಾಗಿರುವ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಮಹಿಳೆಯ ಪತಿ ಕೆಲ ತಿಂಗಳಿನಿಂದ ಕೆಲಸದ ನಿಮಿತ್ತ ಹೊರಗುಳಿದಿದ್ದು ಈ ನಡುವೆ ಆತನ ಪತ್ನಿ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಮಹಿಳೆಯ ಪತಿ ಮನೆಗೆ ಹಿಂತಿರುಗಿದಾಗ ತನ್ನ ಪತ್ನಿ ತನ್ನ ಪ್ರಿಯಕರನೊಂದಿಗೆ ಮನೆಯಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ನೋಡಿದ್ದಾನೆ ಎಂದು ಹೇಳಲಾಗುತ್ತಿದೆ. ಇದಾದ ನಂತರ ಘೋರ ಘಟನೆ ನಡೆದಿದ್ದು ಪತಿಯು ಕೊಡಲಿಯಿಂದ ಪತ್ನಿಯ ಪ್ರಿಯಕರನನ್ನು ತುಂಡರಿಸಿದ್ದಾನೆ.

ಈ ಘಟನೆ ಲಖಿಸರಾಯ್ ಜಿಲ್ಲೆಯ ಮೆಡ್ನಿಚೌಕ್ ಪೊಲೀಸ್ ಠಾಣೆಯ ರಿಷಿ ಪಹರ್‌ಪುರ ಗ್ರಾಮದಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಗ್ರಾಮದಿಂದ ಬಾಲಕನೊಬ್ಬ ನಾಪತ್ತೆಯಾಗಿದ್ದ. ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ರೋಹಿತ್ ಎನ್ನುವಾತನ ಶವವನ್ನು ನದಿಯಿಂದ ವಶಪಡಿಸಿಕೊಳ್ಳಲಾಗಿತ್ತು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಆಗ ಗ್ರಾಮದ ಅದೇ ಮಹಿಳೆಯೊಂದಿಗೆ ಮೃತ ವ್ಯಕ್ತಿಗೆ ಅಕ್ರಮ ಸಂಬಂಧವಿರುವುದು ಗೊತ್ತಾಗಿದೆ.

ಮಹಿಳೆಯ ಗಂಡ ಪಾಟ್ನಾದಲ್ಲಿ ಮೇಸ್ತ್ರಿಯಾಗಿದ್ದು, ಮನೆಯ ಹೊರಗೆ ಹೆಚ್ಚಾಗಿ ಇರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದಾಗಿ ಆತನ ಪತ್ನಿ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಅದೇ ಗ್ರಾಮದ ರೋಹಿತ್ ಯಾದವ್ ಎಂಬಾತನ ಜೊತೆ ಸಂಬಂಧ ಹೊಂದಿದ್ದಳು. ಡಿಸೆಂಬರ್ 31 ರಂದು ಇದ್ದಕ್ಕಿದ್ದಂತೆ ಪುರನ್ ಪಾಸ್ವಾನ್ ಪಾಟ್ನಾದಿಂದ ತಡರಾತ್ರಿ ಮರಳಿದರು. ಆ ಸಮಯದಲ್ಲಿ ರೋಹಿತ್ ಜೊತೆ ತನ್ನ ಹೆಂಡತಿಯನ್ನು ಇದ್ದುದನ್ನು ನೋಡಿ ಪತ್ನಿಗೆ ಏನೂ ಹೇಳದ ಪಾಸ್ವಾನ್, ರೋಹಿತ್ ಯಾದವ್‌ನನ್ನು ಕೊಡಲಿಯಿಂದ ಕೊಂದು ಶವವನ್ನು ನದಿಗೆ ಎಸೆದಿದ್ದಾನೆ. ಮೃತ ದೇಹವನ್ನು ನದಿಗೆ ಎಸೆಯಲು ಅಪರಾಧಿಯ ಪತ್ನಿಯೂ ಆತನಿಗೆ ಬೆಂಬಲ ನೀಡಿದ್ದಾಳೆ ಎಂದು ಹೇಳಲಾಗುತ್ತಿದೆ.

Latest article