ಮೂರುವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕೊಲೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ

ಮೂರುವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕೊಲೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ

ರಾಯಪುರ: ಮೂರೂವರೆ ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಆರೋಪಿಗೆ ಛತ್ತೀಸ್‌ಗಡದ ರಾಜನಂದಗಾಂವ್ ಜಿಲ್ಲೆಯ ಪೋಕ್ಸೊ ನ್ಯಾಯಾಲಯವು ಸೋಮವಾರ ಮರಣದಂಡನೆ ವಿಧಿಸಿದೆ.

ಕಳೆದ ಆಗಸ್ಟ್‌ನಲ್ಲಿ ಪೋಕ್ಸೊ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದ್ದು, ಆತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ನಂತರ, ಆಕೆಯ ಕುತ್ತಿಗೆಯನ್ನು ಕಟ್ಟಿಹಾಕಿ ಆಕೆಯ ಶವವನ್ನು ಮನೆಯ ಮೇಲಿಂದ ಕೆಳಗೆ ತಳ್ಳಿದ ನಂತರ ಆಕೆಯ ಪೋಷಕರ ಬಳಿ ನಾಟಕವಾಡಿದ್ದ.

ಈ ಪ್ರಕರಣದ ಕುರಿತು ತೀರ್ಪು ನೀಡಿರುವ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಶೈಲೇಶ್ ಶರ್ಮಾ, ತಮ್ಮ 120 ಪುಟಗಳ ತೀರ್ಪಿನಲ್ಲಿ, "ಮಗುವಿನ ಮೇಲೆ ಅತ್ಯಾಚಾರ ನಡೆದಾಗ, ಆಕೆಯ ಆತ್ಮವನ್ನು ಕೊಲ್ಲಲಾಗುತ್ತದೆ ಮತ್ತು ದೈಹಿಕವಾಗಿ ಕೊಲ್ಲಲ್ಪಟ್ಟದ್ದು ಆಕೆಯ ದೇಹ" ಎಂದು ಹೇಳಿದ್ದು, ಕಳೆದ ವರ್ಷ ಗಣೇಶ ಹಬ್ಬದ ಸಮಯದಲ್ಲಿ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು ಮತ್ತು ಈ ವರ್ಷ ಅದೇ ಆಚರಣೆಯ ಸಮಯದಲ್ಲಿ ಈ ತೀರ್ಪು ಹೊರಬಿದ್ದಿದೆ.

Related Stories

No stories found.
TV 5 Kannada
tv5kannada.com