Monday, November 29, 2021

ಇಂದು ಸಂಜೆ ಕೃಷಿ ಅಧಿಕಾರಿಯನ್ನು ಕೋರ್ಟ್​ಗೆ ಹಾಜರುಪಡಿಸಲಿರುವ ಎಸಿಬಿ

Must read

ಶಿವಮೊಗ್ಗ: ಗದಗ ಜಂಟಿ ಕೃಷಿ ಅಧಿಕಾರಿ ಟಿ.ಎಸ್.​ರುದ್ರೇಶಪ್ಪನನ್ನು ಎಸಿಬಿ ಅಧಿಕಾರಿಗಳು ಇಂದು ಸಂಜೆ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

ನಿನ್ನೆ ಎಸಿಬಿ ನಡೆಸಿದ ದಾಳಿಯಲ್ಲಿ ರುದ್ರೇಶಪ್ಪ‌ ಮನೆಯಲ್ಲಿ 8 ಕೆಜಿ ಬಂಗಾರದ ಗಟ್ಟಿ, 1 ಕೆಜಿ 400 ಗ್ರಾಂ ಬಂಗಾರ ಹಾಗೂ 3 ಕೆಜಿ ಬೆಳ್ಳಿ ಪತ್ತೆಯಾಗಿತ್ತು. ಇಂದು ರುದ್ರೇಶಪ್ಪ ಅವರಿಗೆ ಸೇರಿದ ಬ್ಯಾಂಕ್ ಲಾಕರ್​ಗಳನ್ನು ತೆರೆಯಲಾಗಿತ್ತು. ಆದರೆ, ಲಾಕರ್​ನಲ್ಲಿ ಯಾವುದೇ ದಾಖಲೆಗಳೂ ಪತ್ತೆಯಾಗಿಲ್ಲ.

ಹೀಗಾಗಿ, ರುದ್ರೇಶಪ್ಪನನ್ನು ಇಂದು ಸಂಜೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲು ನಿರ್ಧರಿಸಲಾಗಿದೆ.

Latest article