Thursday, January 20, 2022

ಮೈಸೂರಿನಲ್ಲಿ ವಾಮಾಚಾರಕ್ಕೆ SSLC ವಿದ್ಯಾರ್ಥಿ ಬಲಿ: ಸ್ನೇಹಿತರಿಂದಲೇ ಕೃತ್ಯ

Must read

ಮೈಸೂರು: ಸ್ನೇಹಿತರೇ ತಮ್ಮ ಗೆಳೆಯನನ್ನು ಧನುರ್ ಅಮಾವಾಸ್ಯೆ ದಿನದಂದು ವಾಮಾಚಾರಕ್ಕೆ ಬಲಿಕೊಟ್ಟಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದ ಸಿದ್ದರಾಜು ಎಂಬುವವರ ಪುತ್ರ ಮಹೇಶ್ ಅಲಿಯಾಸ್ ಮನು (16) ವಾಮಾಚಾರಕ್ಕೆ ಬಲಿಯಾದ ಬಾಲಕ. ಭಾನುವಾರ ಧನುರ್ ಮಾಸದ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಳೇಪುರ ಕೆರೆಯ ಮುಂಭಾಗದಲ್ಲಿ ವಾಮಾಚಾರ ಮಾಡಿ, ಮಹೇಶ್​ನನ್ನು ಬಲಿ ಪಡೆಯಲಾಗಿದೆ. ಈ ಬಾಲಕ ಎಸ್ಎಸ್​ಎಲ್​ಸಿ ವ್ಯಾಸಂಗ ಮಾಡುತ್ತಿದ್ದ.

ಹೆಮ್ಮರಗಾಲ ಗ್ರಾಮದ ಭರತ್, ಅರುಣ್ ಕುಮಾರ್ ಮತ್ತು ಮಾಡ್ರಹಳ್ಳಿ ಗ್ರಾಮದ ಮಹದೇವಸ್ವಾಮಿ ಸ್ನೇಹಿತನನ್ನು ವಾಮಾಚಾರಕ್ಕೆ ಬಲಿ ಕೊಟ್ಟು ಪೊಲೀಸರ ಅತಿಥಿಯಾಗಿರುವ ಕಿರಾತಕರು. ಅಮಾಯಕ ಸ್ನೇಹಿತನನ್ನು ಬಲಿಕೊಟ್ಟ 24 ಘಂಟೆ ಬಳಿಕ ಈ ಘಟನೆ ಬೆಳಕಿಗೆ ಬಂದಿದ್ದು, ದೊಡ್ಡಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಮಹೇಂದ್ರ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ವಾಮಾಚಾರಕ್ಕೆ ಎಸ್ಎಸ್​ಎಲ್​ಸಿ ವಿದ್ಯಾರ್ಥಿ ಬಲಿಯಾಗಿರುವ ಘಟನೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಮೃತ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Latest article