Tuesday, October 26, 2021

ಅವೆಂಜರ್​ ಬೈಕ್​​ ತಂದ ಕುತ್ತು: ಯಾರಿಗೋ ಹಾಕಿದ ಸ್ಕೆಚ್​ಗೆ ಅಮಾಯಕ ಯುವಕ ಬಲಿ

Must read

ಶಿವಮೊಗ್ಗ: ಜಿಲ್ಲೆಯ ಆಯುಧ ಪೂಜೆ ದಿನ ರಾತ್ರಿ ನಡೆದಿದ್ದ ಸಂತೋಷ್‌ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ವೇಳೆ ಯಾರಿಗೋ ಹಾಕಿದ ಸಂಚಿಗೆ ಅಮಾಯಕ ಕೊಲೆಯಾಗಿರುವ ಸಂಗತಿ ಬಹಿರಂಗವಾಗಿದೆ.

ಕಿರಣ್ ಹಾಗೂ ಸುನೀಲ್ ಎನ್ನುವ ಪುಡಿ ರೌಡಿಗಳ ಗ್ಯಾಂಗ್​ ನಡುವೆ ವೈಷಮ್ಯವಿತ್ತು. ಈ ಹಿನ್ನೆಲೆಯಲ್ಲಿ ಸುನೀಲ್ ಹಾಗೂ ಆತನ ಗ್ಯಾಂಗ್ ಕಿರಣ್‌ ಕೊಲೆಗೆ ಸ್ಕೆಚ್ ಹಾಕಿದ್ದರು. ಕಿರಣ್ ಬಳಿ ಅವೆಂಜರ್ ಬೈಕ್​ಯಿದ್ದು ಬಾಪೂಜಿ ನಗರದಲ್ಲಿ ಓಡಾಡುತ್ತಿದ್ದ.

ಇತ್ತ ಮೃತ ಸಂತೋಷ್‌ ​ ಬಳಿಯೂ ಅವೆಂಜರ್ ಬೈಕ್​ಯಿದ್ದು, ಆಯುಧ ಪೂಜೆ ದಿನ ರಾತ್ರಿ ಪರಿಚಯದವರ ಮನೆಗೆ ಊಟಕ್ಕೆ ತೆರಳಿ ವಾಪಸ್​ ಆಗುತ್ತಿದ್ದರು. ಅಷ್ಟರಲ್ಲಾಗಲೇ ಪಾನಮತ್ತರಾಗಿದ್ದ ಸುನೀಲ್ ಹಾಗೂ ಗ್ಯಾಂಗ್ ಅವೆಂಜರ್ ಬೈಕ್ ಬಂದ ತಕ್ಷಣ ಕಿರಣ್​ ಬಂದ ಎಂದು ಮಾರಕಾಸ್ತ್ರಗಳಿಂದ ಸಂತೋಷ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ.

ಹಲ್ಲೆಯಿಂದ ಸಂತೋಷ್​ ಕೆಳಗೆ ಬೀಳುತ್ತಿದ್ದಂತೆಯೆ, ತಾವು ಬೇರೆಯವನನ್ನು ಕೊಲೆ ಮಾಡಿದ್ದೇವೆ ಎಂದು ತಿಳಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಘಟನೆ ಸಂಬಂಧ ಕೋಟೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ವೇಳೆ ಇಡೀ ಪ್ರಕರಣ ಬಯಲಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುನೀಲ್ ಹಾಗೂ ಮೂವರು ಸಹಚರರನ್ನು ಬಂಧಿಸಲಾಗಿದೆ.

More articles

Latest article