Thursday, January 27, 2022

ಬಾದ್ ಷಾ ಮನೆಗೆ ಬಾಂಬ್ ಹಾಕ್ತಿನಿ‌ , ಸರಣಿ ಸ್ಪೋಟ ಮಾಡ್ತಿನಿ ಎಂದವನ ಬಂಧನ

Must read

ಶಾರುಕ್ ಖಾನ್ ಮನೆ ಬ್ಲಾಸ್ಟ್ ಮಾಡ್ತಿನಿ ಎಂದು ಬೆದರಿಕೆ ಹಾಕಿದ್ದ ಆರೋಪಿಯನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬೆದರಿಕೆ ಬಂದ ಹಿನ್ನಲೆ ಶಾರುಕ್ ಖಾನ್ ಮನೆ ಮನ್ನತ್ ಗೆ ಪೊಲೀಸರು ಬಿಗಿ ಬಂದೋಬಸ್ತ್ ನ್ನ ನೀಡಿದ್ರು. ಅಧಿಕೃತವಾಗಿ ದೂರು ದಾಖಲಿಸಿದ ಬಳಿ ಆರೋಪಿಯನ್ನ ಹೆಡೆಮುರಿ ಕಟ್ಟಿದ್ದಾರೆ

ಮಧ್ಯ ಪ್ರದೇಶದ ಜಬಲ್ ಪುರ್ ನಿವಾಸಿಯಾಗಿರುವ ಜಿತೇಶ್ ಠಾಕುರ್ ಬಂಧಿತ ಆರೋಪಿ. ಈತ ಮಹಾರಾಷ್ಟ್ರ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಜನವರಿ 6 ನೇ ತಾರೀಕು ಶಾರುಕ್ ಖಾನ್ ಮನೆ ಸೇರಿ ಮುಂಬೈನಲ್ಲಿ ಸರಣಿ ಸ್ಪೋಟ ಮಾಡೋದಾಗಿ ಕರೆ ಮಾಡಿ ಬೆದರಿಸಿದ್ದ .ಬಾಂಬ್ ಬ್ಲಾಸ್ಟ್ ಎಂದ ಕೂಡಲೆ ಆತಂಕಗೊಂಡಿರುವ ಪೊಲೀಸರು ಅಲರ್ಟ್ ಆಗಿದ್ದರು.

ಇನ್ನು ಕಂಟ್ರೋಲ್ ರೂಂಗೆ ಬಂದ ಕರೆಯನ್ನ ಗಂಭೀರ ವಿಚಾರ ಎಂಬ ಕಾರಣಕ್ಕೆ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿತ್ತು.‌ಮೊದಲಿಗೆ ಕಂಟ್ರೋಲ್ ರೂಂಗೆ ಬಂದ ನಂಬರನ್ನ ಟ್ರೇಸ್ ಮಾಡಿದ ಪೊಲೀಸರು ಮಧ್ಯ ಪ್ರದೇಶದಿಂದ ಕರೆ ಬಂದಿರೋದಾಗಿ ಗೊತ್ತಾಗಿದೆ. ಅಲರ್ಟ್ ಆದ ಪೊಲೀಸರು ಜಬಲ್ ಪುರಕ್ಕೆ ಮಫ್ತಿಯಲ್ಲಿ ಬಂದು ಸ್ಥಳೀಯ ಪೊಲೀಸರ ಸಹಕಾರದೊಂದಿದೆ ಜಿತೇಶ್ ತ್ರಿಪಾಠಿಯನ್ನ ಬಂಧಿಸಲಾಗಿದೆ .ವಿಚಾರಣೆ ವೇಳೆ ಈತ ಸಾಕಷ್ಟು ಬಾರಿ ಶಾರುಕ್ ವಿರುದ್ಧ ತನ್ನ ಎಫ್ ಬಿ ಯಲ್ಲಿ ಪೋಸ್ಟ್ ಹಾಕುತ್ತಿದ್ದ ,ಅಷ್ಟಲ್ಲದೆ ಕೋಮು ಪ್ರಚೋದಕ ಬರಹಗಳನ್ನು ಬರೆದು ತನ್ನ ವಿಕಾರತೆಯನ್ನ ತೋರ್ಪಡಿಸುತ್ತಿದ್ದ ಎನ್ನಲಾಗಿದೆ.

Latest article