Monday, November 29, 2021

ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೊಸ ಆರೋಪ: ಸಮೀರ್ ವಾಂಖೆಡೆ ನನ್ನ ಪೋನ್ ಕದ್ದಾಲಿಕೆ ಮಾಡುತ್ತಿದ್ದಾರೆ

Must read

ಮುಂಬೈ: NCB ಅಧಿಕಾರಿ ಸಮೀರ್ ವಿರುದ್ಧ ಫೋನ್ ಕದ್ದಾಲಿಕೆ ಆರೋಪವನ್ನು ಮಾಡಿದ್ದಾರೆ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಅವರು ಈ ಕುರಿತು ದಾಖಲೆಗಳನ್ನು ಏಜೆನ್ಸಿ ಮುಖ್ಯಸ್ಥರಿಗೆ ನೀಡುವುದಾಗಿ ಘೋಷಿಸಿದ್ದಾರೆ. ನವಾಬ್ ಮಲ್ಲಿಕ್ ಅವರ ಅಳಿಯನನ್ನು NCB ಪೊಲೀಸರು ಬಂಧಿಸಿದ ನಂತರ ಸಮೀರ್ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿ ಬಂದಿದೆ. ಸಮೀರ್ ಮುಂಬೈ ಮತ್ತಿ ಥಾಣೆಯಲ್ಲಿರುವ ತನ್ನ ಇಬ್ಬರು ಸಹಚರರೊಂದಿಗೆ ಕೆಲವರ ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ನವಾಬ್ ಆರೋಪಿಸಿದ್ದಾರೆ. ಸಮೀರ್ ಅವರು ತಮ್ಮ ಕುಟುಂಬ ಸದಸ್ಯರ ದೂರವಾಣಿ ಕರೆ ವಿವರಗಳನ್ನು ಪಡೆದುಕೊಳ್ಳುವ ಯತ್ನದಲ್ಲಿ ನಿರತರಾಗಿದ್ದಾರೆ. ಅವರ ಈ ವರ್ತನೆ ವಿರುದ್ಧ NCB ಮೇಲಾಧಿಕಾರಿಗಳಿಗೆ ದಾಖಲೆ ನೀಡಲಿದ್ದೇನೆ ಎಂದು ಅವರು ಹೇಳಿದ್ದಾರೆ ಇನ್ನೊಂದು ಕಡೆ ನ್ಯಾಯಾಲಯ ಕ್ಕೆ ಅಫಿಡವಿಟ್ ಸಲ್ಲಿಸಿರುವ ಸಮೀರ್ ಅವರು ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ಕೆಲವು ದೊಡ್ಡ ಹಿತಾಸಕ್ತಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ ಅಷ್ಟೇ ಅಲ್ಲದೇ ಬೆದರಿಕೆ ಕರೆ ನಿರಂತರವಾಗಿ ಬರುತ್ತಿದೆ ಎಂದು ಸಮೀರ್ ವಾಂಖೆಡೆ ಹೇಳಿದ್ದಾರೆ.

Latest article