ದುಡ್ಡಿನ ವಿಚಾರಕ್ಕೆ ಮಹಿಳೆಯನ್ನು ರೇಪ್ ಮಾಡಿ ಭೀಕರ ಕೊಲೆ

ದುಡ್ಡಿನ ವಿಚಾರಕ್ಕೆ ಮಹಿಳೆಯನ್ನು ರೇಪ್ ಮಾಡಿ ಭೀಕರ ಕೊಲೆ

ಮುಂಬೈ: ದುಡ್ಡಿನ ವಿಚಾರಕ್ಕಾಗಿ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದ್ದು ಸೆರೆಸಿಕ್ಕ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಎಸ್ಸಿ/ಎಸ್ಟಿ ಕಾಯ್ದೆಯನ್ನು ಸಹ ಸೇರಿಸಲಾಗಿದೆ ಎಂದು ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಾಲೆ ಹೇಳಿದ್ದಾರೆ.

ಘಟನೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

34 ವರ್ಷದ ಮಹಿಳೆ ಶುಕ್ರವಾರ ಮುಂಜಾನೆ ಸಕಿನಾಕಾದ ಉಪನಗರದ ಸ್ಟೇಷನರಿ ಟೆಂಪೋದಲ್ಲಿ ವ್ಯಕ್ತಿಯೊಬ್ಬ ರಾಡ್ ನಿಂದ ಹಲ್ಲೆಗೊಳಗಾಗಿ ಅತ್ಯಾಚಾರಕ್ಕೊಳಗಾಗಿದ್ದು. ಶನಿವಾರ ಮುಂಜಾನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ..

ಪೊಲೀಸರು ಈ ಪ್ರಕರಣವನ್ನು ಆದ್ಯತೆಯ ಮೇಲೆ ಒಂದು ತಿಂಗಳೊಳಗೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಹೇಳಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗ (NCW) ಹಾಗೂ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ (NCSC) ಉಪಾಧ್ಯಕ್ಷರು ಪೊಲೀಸರನ್ನು ಸಂಪರ್ಕಿಸಿ ಪ್ರಕರಣದ ಬಗ್ಗೆ ಚರ್ಚಿಸಿದರು ಎಂದು ಅವರು ಹೇಳಿದರು

Related Stories

No stories found.
TV 5 Kannada
tv5kannada.com