ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆ ಮುಂದುವರಿದ ಹಿನ್ನಲೆ ಕಲಬುರಗಿ ಕೇಂದ್ರ ಕಾರಾಗೃಹ ಮೇಲೆ ಕಲಬುರಗಿ ಸಿಟಿ ಪೊಲೀಸರು ಧೀಡಿರ್ ದಾಳಿಯನ್ನು ನಡೆಸಿ ಪರಿಶೀಲನೆಯನ್ನು ನಡೆಸಿದ್ದಾರೆ. ಇನ್ನು ಈ ದಾಳಿ ವೇಳೆ 4 ಮೊಬೈಲ್, 4 ಸಿಮ್ ಕಾರ್ಡ್ ಮತ್ತು 1.62000 ಲಕ್ಷ ರೂಪಾಯಿ ಪತ್ತೆಯಾಗಿದೆ. ಪೊಲೀಸರಿಂದ ಅನಿರೀಕ್ಷಿತ ರೇಡ್ನಿಂದಾಗಿ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ಬಟಾ ಬಯಲಾಗಿದೆ. ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಕಲಬುರಗಿ ಸಿಟಿ ಪೊಲೀಸರು ಜೈಲಿನ ಒಳಗೆ ಮೊಬೈಲ್, ದುಡ್ಡು ಬಂದಿರುವ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದಾರೆ.