ರಾಷ್ಟ್ರೀಯ ಖೋ ಖೋ ಆಟಗಾರ್ತಿ ರೇಪ್ ಪ್ರಕರಣ: ಸಿಕ್ಕಿಬಿದ್ದ ಅತ್ಯಾಚಾರಿಯು ಮಾದಕ ವ್ಯಸನಿ!

ರಾಷ್ಟ್ರೀಯ ಖೋ ಖೋ ಆಟಗಾರ್ತಿ ರೇಪ್ ಪ್ರಕರಣ: ಸಿಕ್ಕಿಬಿದ್ದ ಅತ್ಯಾಚಾರಿಯು ಮಾದಕ ವ್ಯಸನಿ!

ಬಿಜ್ನೋರ್: 24 ವರ್ಷದ ರಾಷ್ಟ್ರೀಯ ಮಟ್ಟದ ಖೋ ಖೋ ಆಟಗಾರ್ತಿಯ ಅತ್ಯಾಚಾರ ಹಾಗೂ ಕೊಲೆ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಮಹಿಳೆಯ ಶವ ಬಿಜ್ನೋರ್‌ನ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಘಟನೆ ನಡೆದಾಗ ಸಂತ್ರಸ್ತೆಯು ಸ್ನೇಹಿತೆಗೆ ಕರೆ ಮಾಡಿದ್ದು, ಆಕೆ ಹಂಚಿಕೊಂಡ ಆಡಿಯೋ ಕ್ಲಿಪ್ ಸಹಾಯದಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಶಹಜಾದ್ ಅಕಾ ಖದೀಮ್ ಈಕೆಯನ್ನು ನೋಡಿ ನಂತರ ಸಿಮೆಂಟ್ ರೈಲ್ವೇ ಸ್ಲೀಪರ್‌ಗಳ ಬಳಿ ಎಳೆದು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಗೊತ್ತಾಗಿದೆ.

ಆರೋಪಿಗಳು ಮಹಿಳೆಯ ಮೊಬೈಲ್ ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ಆಕೆಯನ್ನು ಅದೇ ಸಿಮೆಂಟ್ ಸ್ಲೀಪರ್ ನಲ್ಲಿ ಬಿಟ್ಟಿದ್ದಾರೆ..

ಮನೆಗೆ ತಲುಪಿದ ನಂತರ ಆರೋಪಿ ಫೋನ್ ಸ್ವಿಚ್ ಆಫ್ ಮಾಡಿದ್ದರೂ ಆತನ ಸ್ಥಳವನ್ನು ಪತ್ತೆ ಹಚ್ಚಿದ ಪೊಲೀಸರು ಆತನ ನಿವಾಸಕ್ಕೆ ತಲುಪಿ ಮಂಗಳವಾರ ಸಂಜೆ ಆತನನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಯು ವಿವಾಹಿತನಾಗಿದ್ದು, ಒಬ್ಬ ಮಗಳಿದ್ದಾಳೆ.

Related Stories

No stories found.
TV 5 Kannada
tv5kannada.com