ತಮ್ಮನ ಮೇಲೆ ಹಲ್ಲೆ ನಡೆಸಿದ ದ್ವೇಷ: ಫುಟ್ಬಾಲ್ ಸ್ಟೇಡಿಯಂನಲ್ಲಿ ಬಿತ್ತು ರೌಡಿ ಹೆಣ

ತಮ್ಮನ ಮೇಲೆ ಹಲ್ಲೆ ನಡೆಸಿದ ದ್ವೇಷ: ಫುಟ್ಬಾಲ್ ಸ್ಟೇಡಿಯಂನಲ್ಲಿ ಬಿತ್ತು ರೌಡಿ ಹೆಣ

ಬೆಂಗಳೂರು: ಅಶೋಕ ನಗರ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದಿದ್ದ ರೌಡಿಶೀಟರ್ ಅರವಿಂದ್ ಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಸ್ಟಾಲಿನ್​, ಲೂಯಿಸ್ ಜಾಕ್, ಅರುಣ್ ಹಾಗೂ ವಿಜಯ್ ಬಂಧಿತ ಆರೋಪಿಗಳು.

ಆರೋಪಿಗಳು ಜೈಲಿನಿಂದ ಹೊರ ಬಂದ ರೌಡಿಶೀಟರ್ ಅರವಿಂದ್​ನನ್ನು ಅಶೋಕ ನಗರ ಫುಟ್ಬಾಲ್ ಸ್ಟೇಡಿಯಂನಲ್ಲಿ ಅಟ್ಯಾಕ್​ ಮಾಡಿ, ಮಾರಾಕಾಸ್ತ್ರಗಳಿಂದ ನೇರವಾಗಿ ಮುಖ ಹಾಗೂ ತಲೆಗೆ ಹೊಡೆದು ಭೀಕರವಾಗಿ ಹತ್ಯೆಗೈದಿದ್ದರು.

ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆಗಿಳಿದ ಅಶೋಕ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿಂದೆ ಮೃತ ಅರವಿಂದ್,​​ ಆರೋಪಿ ಸ್ಟಾಲಿನ್​ ಸಹೋದರನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಇದೇ ಕಾರಣಕ್ಕೆ ಸ್ಟಾಲಿನ್ ತನ್ನ ಸಹಚರರೊಂದಿಗೆ ಸೇರಿ ಅರವಿಂದ್​ನನ್ನು ಕೊಲೆ ಮಾಡಿದ್ದಾನೆ ಎನ್ನುವ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

Related Stories

No stories found.
TV 5 Kannada
tv5kannada.com