Tuesday, November 29, 2022

ಹಳೇ ವೈಷ್ಯಮ್ಯಕ್ಕೆ ಕತ್ತು ಕುಯ್ದು ಯುವಕನ ಹತ್ಯೆ

Must read

ಹಳೇ ವೈಷ್ಯಮ್ಯದಿಂದಾಗಿ ಯುವಕರ ಗುಂಪೊಂದು ಧನಂಜಯ(26) ಎಂಬ ಯುವಕನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮಂಡ್ಯದ  ಪಾಂಡವಪುರ ತಾಲೂಕಿನ ನೀಲನಹಳ್ಳಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀಸಾಗರ ಗ್ರಾಮದ ನಿವಾಸಿಯಾಗಿರುವ ಧನಂಜಯ್​ ಪಾಂಡವಪುರದಲ್ಲಿ ಮೊಬೈಲ್​ ಅಂಗಡಿ ಇಟ್ಟುಕೊಂಡಿದ. ಇನ್ನು ರೌಡಿಶೀಟರ್ ರೋಹಿತ್ ಹಾಗೂ ಧನಂಜಯ ನಡುವೆ ಹಳೇ ದ್ವೇಷವಿದ್ದ ಕಾರಣ ರೋಹಿತ್​ ಆತನ ಸಹಚರರ ಜೊತ ಸೇರಿಕೊಂಡು ಮಂಡ್ಯದ ನೀಲನಹಳ್ಳಿ ಗೇಟ್ ಬಳಿ ತಡರಾತ್ರಿ ಧನಂಜಯನನ್ನು ಹತ್ಯೆಗೈದಿದ್ದಾರೆ. ತಡರಾತ್ರಿ ಮಂಡ್ಯದ ನೀಲನಹಳ್ಳಿ ಗೇಟ್ ಬಳಿ ಚಾಕುವಿನಿಂದ ಧನಂಜಯ ಕುತ್ತಿಗೆ ಭಾಗಕ್ಕೆ ಇರಿದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮೇಲುಕೋಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಲೆ ಮರೆಸಿಕೊಂಡ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ ಸದ್ಯ ಮೇಲುಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Latest article