Tuesday, October 26, 2021

ಸಿಲಿಕಾನ್​ ಸಿಟಿಯಲ್ಲಿ ಲ್ಯಾಪ್​ಟಾಪ್​ ಕಳ್ಳತನ ಮಾಡ್ತಿದ್ದ ಖತರ್ನಾಕ್ ಕಳ್ಳ​ ಅಂದರ್​

Must read

ಬೆಂಗಳೂರು: ನಗರದಲ್ಲಿ ಲ್ಯಾಪ್​ಟಾಪ್​ ಹಾಗೂ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಗುಲ್ಬರ್ಗ ಮೂಲದ ಲಿಯಾಕತ್ ಬಂಧಿತ ಆರೋಪಿ.

ನಗರದ ಮೆಜೆಸ್ಟಿಕ್​ನಲ್ಲಿ ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್​​ ಮಾಡುತ್ತಿದ್ದ ಆರೋಪಿ ಕ್ಷಣ ಮಾತ್ರದಲ್ಲೇ ಬ್ಯಾಗ್​ ಕದ್ದು ಪರಾರಿಯಾಗುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಏಳು ಲ್ಯಾಪ್ ಟಾಪ್ ಮತ್ತು ಒಂದು ಟ್ಯಾಬ್​ನ್ನು ವಶಕ್ಕೆ ಪಡೆದಿದ್ದಾರೆ.

More articles

Latest article