ಕುಡಿದ ಮತ್ತಿನಲ್ಲಿ ನಾನೇ ತಪ್ಪು ಮಾಡಿದ್ದು ಎಂದು ಕೊಲೆಯಾದ..!

ಮಾಡದ ತಪ್ಪಿಗೆ ಶಿಕ್ಷೆ, ಅವಮಾನ ಅನುಭವಿಸಿದ್ದ ಕೊಲೆಯ ಆರೋಪಿ ಸ್ನೇಹಿತನನ್ನೇ ಮನಸೋಇಚ್ಛೆ ಕಡಿದು ಕೊಂದ
ಕುಡಿದ ಮತ್ತಿನಲ್ಲಿ ನಾನೇ ತಪ್ಪು ಮಾಡಿದ್ದು ಎಂದು ಕೊಲೆಯಾದ..!

ಬೆಂಗಳೂರು: ನಗರದ ಕೆಜಿ ಹಳ್ಳಿಯಲ್ಲಿ ನಡೆದ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಕೊಲೆಯಾದ ರವಿ ನಾಯ್ಡು ಈ ಹಿಂದೆಯೇ ಜೈಲಿಗೆ ಹೋಗಬೇಕಾಗಿದ್ದ ಆರೋಪಿ ಎನ್ನುವ ಮಾಹಿತಿ ಬಹಿರಂಗವಾಗಿದೆ.

2017ರ ಹೊಸ ವರ್ಷದಂದು ಕಮ್ಮನಹಳ್ಳಿಯಲ್ಲಿ ನಡೆದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಜಾರ್ಜ್​ ಎನ್ನುವಾತನನ್ನು ಬಂಧಿಸಲಾಗಿತ್ತು. ಆದರೆ ಘಟನೆ ನಡೆದು ಸುಮಾರು 4 ವರ್ಷಗಳ ಬಳಿಕ ಇದೇ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ.

ರವಿ ಕೊಲೆಯ ಆರೋಪಿ ಜಾರ್ಜ್​​ ವಿಚಾರಣೆ ವೇಳೆ ಕೆಲವು ಇಂಟ್ರಸ್ಟಿಂಗ್​ ವಿಚಾರ ಬೆಳಕಿಗೆ ಬಂದಿದೆ. ಕೊಲೆ ಆರೋಪಿ ಜಾರ್ಜ್​ನನ್ನು ಕಾಮುಕನಂತೆ ನೋಡುತ್ತಿದ್ದ ಹಿನ್ನಲೆಯಲ್ಲಿ ತಾನು ಮೊದಲಿದ್ದ ಏರಿಯಾವನ್ನೇ ಖಾಲಿ ಮಾಡಿದ್ದ. ಮೃತ ರವಿ ಆರೋಪಿ ಜಾರ್ಜ್​ಗೆ ಸಿಕ್ಕ ವೇಳೆ ರೇಪಿಸ್ಟ್​ ಎಂದು ರೇಗಿಸಿದ್ದಾನೆ. ಈವೇಳೆ ಜಾರ್ಜ್​ ನಾನು ತಪ್ಪು ಮಾಡಿಲ್ಲ ಸುಮ್ಮನೆ ಆರೋಪ ಹೊರೆಸಿದ್ದಾರೆ ದಯವಿಟ್ಟು ರೇಪಿಸ್ಟ್ ಎಂದು ಕರೆಯಬೇಡ ಎಂದು ಕೇಳಿಕೊಂಡಿದ್ದಾನೆ. ಮದ್ಯಪಾನದ ಮತ್ತಿನಲ್ಲಿದ್ದ ರವಿ ನೀನಲ್ಲ ನಾನೇ ಆ ಆರೋಪಿ. ತಾನೇ ಹುಡುಗಿ ಜೊತೆ ಅಸಭ್ಯವಾಗಿ ವರ್ತಿಸಿದ್ದು ಎಂದು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಮಾಡದ ತಪ್ಪಿಗೆ ಶಿಕ್ಷೆ, ಅವಮಾನ ಅನುಭವಿಸಿದ್ದ ಜಾರ್ಜ್ ತನ್ನ ಈಗಿನ ಪರಿಸ್ಥಿತಿಗೆ ರವಿಯೇ ಕಾರಣ ಎಂದು ರೋಸಿ ಹೋಗಿ, ಆತನನ್ನು ಕೊಲೆ ಮಾಡುವ ಪ್ಲಾನ್​ ಮಾಡಿದ್ದ. ಅದರಂತೆ ಆಗಸ್ಟ್ 31ರಂದು ಜಾರ್ಜ್​ ತನ್ನ ಸಹಚರರೊಂದಿಗೆ ಸೇರಿ ರವಿಯನ್ನು ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಕಡಿದು ಕೊಲೆ ಮಾಡಿದ್ದ ಎನ್ನಲಾಗಿದೆ.

Related Stories

No stories found.
TV 5 Kannada
tv5kannada.com