Friday, January 21, 2022

ತುಮಕೂರು ಕರಿಬಸವೇಶ್ವರ ಮಠದ ಆನೆ ಅಪಹರಣಕ್ಕೆ ಯತ್ನ…!

Must read

ತುಮಕೂರು: ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಎಂಬ ಮಾತಿದೆ. ಅಡಿಕೆ ಹೇಗೋ ಕಳ್ಳತನ ಮಾಡಬಹದು. ಆದರೆ, ಬಂಡೆಗಾತ್ರದ ಆನೆಯನ್ನು ಕಳವು ಮಾಡೋಕೇ ಸಾಧ್ಯವೇ ಇಲ್ಲ. ಆದರೆ, ತುಮಕೂರಿನಲ್ಲಿ ಇದು ಸಾಧ್ಯವಾಗಿದೆ. ಕರಿಬಸವೇಶ್ವರ ಮಠದ ಆನೆಯನ್ನು ಅಪಹರಣ ಮಾಡಲು ಯತ್ನಿಸಲಾಗಿದೆ.

ಖದೀಮರ ಗುಂಪೊಂದು ತುಮಕೂರು ನಗರದ ಹೊರಪೇಟೆಯಲ್ಲಿರುವ ಕರಿಬಸವೇಶ್ವರ ಮಠದ ಲಕ್ಷ್ಮೀ ಎಂಬ ಹೆಣ್ಣಾನೆಯನ್ನು ಅಪಹರಿಸಿ ಗುಜರಾತ್​ಗೆ ಸಾಗಿಸಲು ಯತ್ನಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ಆನೆಗೆ ಬನ್ನೇರಘಟ್ಟದಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಲಾರಿಯಲ್ಲಿ ಹತ್ತಿಸಿಕೊಂಡು ಹೋಗಿದ್ದಾರೆ.

ದಾಬಾಸ್ ಪೇಟೆ ಬಳಿ ಮಠದ ಆನೆಯ ಮಾವುತನಿಗೆ ಹಲ್ಲೆ ಮಾಡಿ, ಆತನನ್ನು ಕೆಳಗಿಳಿಸಿ ಆನೆಯನ್ನು ಅಪಹರಿಸಲು ಯತ್ನಿಸಿದ್ದಾರೆ. ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗುವ ಬದಲು ಕುಣಿಗಲ್ ತಾಲೂಕಿನ ನಾರನಹಳ್ಳಿ ಹಳ್ಳಿಯಲ್ಲಿ ಆನೆಯನ್ನು ಬಚ್ಚಿಡಲಾಗಿತ್ತು. ಈ ವೇಳೆ ಆನೆಗೂ ಜೆಸಿಬಿಯಿಂದ ಹಲ್ಲೆ ಮಾಡಲಾಗಿತ್ತು ಅಂತ ಮಠದ ಸಿಬ್ಬಂದಿ ಆರೋಪಿಸುತ್ತಿದ್ದಾರೆ.

ಈ ಹೆಣ್ಣಾನೆ ಕಳೆದ 29 ವರ್ಷಗಳಿಂದ ಕರಿಬಸವಸ್ವಾಮಿ ಮಠದಲ್ಲಿದೆ. ಕಾನೂನು ಬದ್ದವಾಗಿ ಈ ಆನೆಯನ್ನು ಮಠದಲ್ಲಿ ಬೆಳೆಸಿಕೊಂಡು ಬರಲಾಗಿದೆ. ಜಾತ್ರೆ ಉತ್ಸವದ ಸಂದರ್ಭದಲ್ಲಿ ಸಂಪ್ರದಾಯದಂತೆ ಆನೆ ಬಳಕೆಯಾಗುತ್ತದೆ. ಯಾರಿಗೂ ಉಪದ್ರವ ಕೊಡದ ಆನೆ ಸೌಮ್ಯಸ್ವಭಾವದ್ದು. ಇಂಥಹ ಆನೆಗಳನ್ನು ಸರ್ಕಸ್ ಕಂಪನಿಗಳಲ್ಲಿ ಬಳಸಿಕೊಂಡರೆ ಒಳ್ಳೆ ಲಾಭ ಬರುತ್ತದೆಯಂತೆ. ಹಾಗಾಗಿ, ಅರಣ್ಯ ಅಧಿಕಾರಿಗಳು ಗುಜರಾತಿನ ಸರ್ಕಸ್ ಕಂಪನಿಯ ಆಮಿಷಕ್ಕೆ ಒಳಗಾಗಿ ಅವರೊಂದಿಗೆ ಸೇರಿಕೊಂಡು ಆನೆಯನ್ನು ಮಾರಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಕಳೆದ ತಿಂಗಳು ಆನೆಯ ಆರೋಗ್ಯ ಪರೀಕ್ಷೆ ನಡೆಸಿ ಬಂದಿದ್ದೆವು. ಆದರೂ ಇದ್ದಕಿದ್ದಂತೆ ಅರಣ್ಯ ಇಲಾಖೆ ಆಧಿಕಾರಿಗಳು ಬಂದು ಆನೆ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ. ಆಪರೇಷನ್ ಮಾಡಬೇಕು ಎಂದು ಸರ್ಕಸ್ ಕಂಪನಿ ಲಾರಿ ಮತ್ತು ಅವರ 8 ಜನ ಮಾವುತರನ್ನು ಕರೆತಂದು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅರ್ಧದಾರಿಯಲ್ಲಿ ಮಾರ್ಗ ಬದಲಿಸಿ ಅಪಹರಿಸಿದ್ದಾರೆ ಮಠದ ಸಿಬ್ಬಂದಿ ತಿಳಿಸಿದ್ದಾರೆ.

ಅಪಹರಿಸಿದ ಆನೆ ಲಕ್ಷ್ಮೀ ನಿನ್ನೆ ಸಂಜೆ ವೇಳೆ ಕುಣಿಗಲ್ ತಾಲೂಕಿನ ಹಳ್ಳಿಯೊಂದರಲ್ಲಿ ಪತ್ತೆಯಾಗಿದೆ. ನಂತರ ಮಠದವರಲು ಲಾರಿ ಮೂಲಕ ಆನೆಯನ್ನು ವಾಪಸ್ ಮಠಕ್ಕೆ ಕರೆತಂದಿದ್ದಾರೆ. ಈ ಆನೆ ಸುಮಾರು 40 ಲಕ್ಷ ಬೆಲೆ ಬಾಳುತ್ತದೆಯಂತೆ. ಹಾಗಾಗಿ, ಸರ್ಕಸ್ ಕಂಪನಿಯವರಿಗೆ ಆನೆಯನ್ನು ಮಾರಲು ಪ್ಲಾನ್ ನಡೆದಿತ್ತು ಎಂದು ಆರೋಪಿಸಲಾಗಿದೆ.

Also read:  ರೈಲ್ವೆ ಕಂಬಿಗಳ ತಡೆಗೋಡೆಯನ್ನೇ ದಾಟಿದ ಗಜರಾಜ: ವಿಡಿಯೋ ವೈರಲ್​

Latest article