Friday, January 21, 2022

ಬರೋಬ್ಬರಿ 7 ಜನರ ಮೇಲೆ ಸುಳ್ಳು ರೇಪ್ ಆರೋಪ ಮತ್ತು ದುಡ್ಡಿಗಾಗಿ ಬೇಡಿಕೆ! ಖತರ್ನಾಕ್ ಲೇಡಿ ಅಂದರ್!

Must read

ಗುರ್ಗಾಂವ್‌ನ ಆಯುಷಿ ಭಾಟಿಯಾ ಎಂಬ 22 ವರ್ಷದ ಹುಡುಗಿಯನ್ನು ಇತ್ತೀಚೆಗೆ ಹರಿಯಾಣದ ಗುರ್‌ಗಾಂವ್‌ನಿಂದ ಬಂಧಿಸಲಾಗಿದೆ

ಡಿಸೆಂಬರ್ 29 ರಂದು, 8 ಪುರುಷರ ವಿರುದ್ಧ ನಕಲಿ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ ಆರೋಪದ ಮೇಲೆ ಆಯುಷಿ ಭಾಟಿಯಾ ಎಂಬ ಮಹಿಳೆಯನ್ನು ಬಂಧಿಸಲಾಗಿದ್ದು ಈಕೆ ಗುರ್ಗಾಂವ್ ಮೂಲದವಳು ಮತ್ತು 1 ವರ್ಷದಲ್ಲಿ ಸುಮಾರು 8 ಪುರುಷರನ್ನು ನಕಲಿ ಆರೋಪದಡಿ ಸಿಕ್ಕಿ ಹಾಕಿದ್ದಾಳೆ ಎಂದು ಹೇಳಲಾಗುತ್ತಿದೆ.
ಆಯುಷಿ ಭಾಟಿಯಾ ಬಿಎ ಹಾನ್ಸ್ ವಿದ್ಯಾರ್ಥಿ ಎಂದು ಗುರ್ಗಾಂವ್ ಪೊಲೀಸರು ಖಚಿತಪಡಿಸಿದ್ದಾರೆ. ದೆಹಲಿಯ ಆತ್ಮಾ ರಾಮ್ ಕಾಲೇಜಿನಲ್ಲಿ ಓದುತ್ತಿದ್ದ ಆಕೆ ಈ ಕೃತ್ಯ ಎಸಗಿದ್ದಾಳೆ.

ಆಯುಷಿ ಭಾಟಿಯಾ ಅವರ ಬಂಧನವನ್ನು ಗುರ್ಗಾಂವ್ ಪೊಲೀಸ್ ಅಧಿಕಾರಿಗಳು 2021 ರ ಡಿಸೆಂಬರ್ 29 ರಂದು ದೃಢಪಡಿಸಿದ್ದು ಆಕೆಯನ್ನು ಪೊಲೀಸರು ಸುಲಿಗೆ ಆರೋಪದಡಿಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಗುರ್ಗಾಂವ್ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದರು.

ವೃತ್ತಿಯಲ್ಲಿ ಪತ್ರಕರ್ತೆಯಾಗಿರುವ ದೀಪಿಕಾ ನಾರಾಯಣ ಭಾರದ್ವಾಜ್ ಅವರು ಆಯುಷಿ ನಡೆಸಿದ ಅಪರಾಧದ ಬಗ್ಗೆ ಜನರಿಗೆ ಅರಿವು ಮೂಡಿಸಲು ತಮ್ಮ ಟ್ವಿಟರ್ ಹ್ಯಾಂಡಲ್‌ನ ಸಹಾಯವನ್ನು ಪಡೆಡಿದ್ದು ಇದು ಈಗ ವೈರಲ್ ಆಗಿದೆ.

ಅಲ್ಲದೆ, ಆರೋಪಿಯಾದ ಈಕೆ ತನ್ನ ಒಪ್ಪಿಗೆಯೊಂದಿಗೆ ಈ ಎಲ್ಲ ಪುರುಷರೊಂದಿಗೆ ಸಂಬಂಧವನ್ನು ಹೊಂದಿ ನಂತರ ಭಾರಿ ಮೊತ್ತಕ್ಕೆ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದಳು ಎಂದು ಅವರು ಉಲ್ಲೇಖಿಸಿದ್ದಾರೆ.

ಈ ಯುವತಿಯನ್ನು 384, 389, 120B, 506, 509 ಎಂಬ ಹಲವು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ. ಆಯುಷಿ ನಡೆಸುತ್ತಿದ್ದ ಎಲ್ಲಾ ಚಟುವಟಿಕೆಗಳಿಗೆ ಆಕೆಯ ಚಿಕ್ಕಪ್ಪ ಮತ್ತು ತಾಯಿ ಬೆಂಬಲ ನೀಡುತ್ತಿದ್ದರು ಎನ್ನಲಾಗಿದೆ.

ಆಕೆಯ ತಾಯಿ ಮತ್ತು ಚಿಕ್ಕಪ್ಪ ನರೇಂದ್ರ ಇನ್ನೂ ಪತ್ತೆಯಾಗಿಲ್ಲ ಮತ್ತು ಪೊಲೀಸರು ಇನ್ನೂ ಅವರ ಸ್ಥಳವನ್ನು ಹುಡುಕುತ್ತಿದ್ದಾರೆ. ಡಿಎಲ್‌ಎಫ್ 3ನೇ ಹಂತದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Latest article