ನಡು ರಸ್ತೆಯಲ್ಲಿ ಯವಕರನ್ನ ಅಟ್ಟಾಡಿಸಿ ಪುಡಿ ರೌಡಿಗಳು ಪುಂಡಾಟವನ್ನು ಮೆರೆದ ಘಟನೆ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಾಡಹಗಲೇ ಲಾಂಗ್ ಹಿಡಿದು ಪುಂಡರು ರೌಡಿಗಳನ್ನ ಅಟ್ಟಾಡಿಸಿಕೊಂಡು ಹೋಗಿ ಹುಚ್ಚಾಟವನ್ನು ಮೆರೆದಿದ್ದಾರೆ. ಇದರಿಂದಾಗಿ ಅಲ್ಲಿನ ನಾಗರಿಕರು ರಸ್ತೆಯಲ್ಲಿ ಅಡ್ಡಡ್ಡಾಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಲ್ಲಿ 3ಕ್ಕೂ ಹೆಚ್ಚು ಘಟನೆಗಳು ವರದಿಯಾಗಿದೆ. ಇಲ್ಲಿ ಪುಂಡರ ಗುಂಪು ಲಾಂಗು ಹಿಡಿದು ಯುವಕರನ್ನ ಬೆದರಿಸುವುದು, ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದೆ .ಈ ಪುಂಡರ ಹುಚ್ಚಾಟಕ್ಕೆ ಡಿ.ಜೆ.ಹಳ್ಳಿ ಸ್ಥಳೀಯರು ಬೇಸತ್ತಿದ್ದಾರೆ.