Thursday, January 20, 2022

ಜಿಲ್ಲಾಧಿಕಾರಿ ವಾಹನದ ಮೇಲೆಯೇ 28 ಕೇಸ್, 27 ಸಾವಿರ ದಂಡ ಜಡಿದ ಟ್ರಾಫಿಕ್ ಪೊಲೀಸರು!

Must read

ಹೈದರಾಬಾದ್: ಕಾಮರೆಡ್ಡಿ ಜಿಲ್ಲಾಧಿಕಾರಿಗಳ ಅಧಿಕೃತ ವಾಹನ ಸಂಚಾರ ನಿಯಮಗಳನ್ನು ಉಲ್ಲಂಘಿಸಿ 28 ಬಾರಿ ಇ-ಚಲನ್‌ಗಳನ್ನು ಪಡೆದುಕೊಂಡಿದೆ. 2016 ರಿಂದ ಆಗಸ್ಟ್, 2021 ರವರೆಗೆ, ಟ್ರಾಫಿಕ್ ಪೊಲೀಸರು ವಾಹನ ಸಂಖ್ಯೆ TS16EE 3366 ಗೆ ಇ-ಚಲನ್‌ಗಳನ್ನು ಮತ್ತು 27,580 ರೂ ದಂಡವನ್ನು ವಿಧಿಸಿದ್ದಾರೆ.

ನಿಜಾಮಾಬಾದ್ ಜಿಲ್ಲೆಯ ವಿಭಜನೆಯ ನಂತರ, ಕಾಮರೆಡ್ಡಿ ಜಿಲ್ಲೆಯನ್ನು ಅಕ್ಟೋಬರ್ 11, 2016 ರಂದು ರಚಿಸಲಾಯಿತು. ಹಿಂದೆ, IAS ಅಧಿಕಾರಿಗಳಾದ ಸತ್ಯನಾರಾಯಣ ಮತ್ತು ಶರತ್ ಅವರು ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಜಿಲ್ಲಾಧಿಕಾರಿ ಜಿತೇಶ್ ಪಾಟೀಲ್ ಆಗಿದ್ದು ಈ ಅಧಿಕೃತ ವಾಹನವು ಕಾಮರೆಡ್ಡಿ ಜಿಲ್ಲೆಗೆ ಮಾತ್ರವಲ್ಲದೆ, ನಿಜಾಮಾಬಾದ್‌ನ ಉಳಿದ ಜಿಲ್ಲೆ ಮತ್ತು ರಾಜ್ಯದ ರಾಜಧಾನಿ ಹೈದರಾಬಾದ್‌ಗೆ ಕೂಡ ಬಳಸಲ್ಪಡುತ್ತದೆ ಎನ್ನಲಾಗಿದೆ.

ಇದೀಗ ಜಿಲ್ಲಾಧಿಕಾರಿಗಳ ವಾಹನದಿಂದಲೇ ಸಂಚಾರ ನಿಯಮ ಉಲ್ಲಂಘನೆ ಹಾಗೂ ವಾಹನದ ವಿರುದ್ಧ ಇ-ಚಲನ್‌ಗಳ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ತ್ವರಿತವಾಗಿ ತೆರಳಿ ಪೊಲೀಸ್ ಇಲಾಖೆಗೆ 27,580 ರೂ. ದಂಡ ಕಟ್ಟಿದ್ದಾರೆ ಎನ್ನಲಾಗಿದೆ.

Latest article